ಮಹಿಳೆಯಲ್ಲಿ ಕೊರೋನ ವೈರಸ್ ಶಂಕೆ: ಚಿಕ್ಕಮಗಳೂರಿನಲ್ಲಿ ಆತಂಕ

ಚಿಕ್ಕಮಗಳೂರು, ಮಾ.17: ಸೋಮವಾರ ಹಾಗೂ ಮಂಗಳವಾರ ಜಿಲ್ಲೆಯ ಇಬ್ಬರಲ್ಲಿ ಕೊರೋನ ವೈರಸ್ ಶಂಕೆ ವ್ಯಕ್ತವಾಗಿದ್ದು, ಈ ಪೈಕಿ ಒಂದು ಪ್ರಕರಣ ನೆಗೆಟಿವ್ ಆಗಿದ್ದು, ಮತ್ತೊಂದು ಪ್ರಕರಣದ ವೈದ್ಯಕೀಯ ಪರೀಕ್ಷೆಯ ವರದಿ ಇನ್ನಷ್ಟೇ ಬರಬೇಕಿದೆ.
ಒಂದು ವಾರದ ಹಿಂದೆ 32 ವರ್ಷದ ವ್ಯಕ್ತಿಯೊಬ್ಬರು ಸೌದಿ ಅರೇಬಿಯದಿಂದ ಜಿಲ್ಲೆಯ ಕೊಪ್ಪ ಪಟ್ಟಣಕ್ಕೆ ಹಿಂದಿರುಗಿದ್ದರು. ಈ ವ್ಯಕ್ತಿಗೆ 2 ದಿನಗಳ ಹಿಂದೆ ಜ್ವರ, ಕೆಮ್ಮು, ಶೀತ ಕಾಣಿಸಿಕೊಂಡಿತ್ತು. ಜ್ವರ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಸೋಮವಾರ ಕೊಪ್ಪ ಸರಾರಿ ಆಸ್ಪತ್ರೆಯಲ್ಲಿ ತಪಾಸಣೆಗೆ ಆಮಿಸಿದ್ದ ವೇಳೆ ಅವರನ್ನು ವೈದ್ಯರು ವಿಶೇಷ ವಾರ್ಡ್ ಗೆ ದಾಖಲಿಸಿ ರಕ್ತ ಹಾೂ ಗಂಟಲ ದ್ರವವನ್ನು ಶಿವಮೊಗ್ಗದದ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳಿಸಿದ್ದರು. ಈ ವ್ಯಕ್ತಿಯ ವೈದ್ಯಕೀಯ ಪರೀಕ್ಷಾ ವರದಿ ಮಂಗಳವಾರ ವೈದ್ಯರ ಕೈಸೇರಿದ್ದು, ವರದಿಯಲ್ಲಿ ನೆಗೆಟಿವ್ ಅಂಶ ಬಂದಿದ್ದು, ಇದರಿಂದಾಗಿ ಕೊಪ್ಪ ತಾಲೂಕಿನ ಜನತೆ ವೈದ್ಯರು ಹಾೂ ವ್ಯಕ್ತಿಯ ಸಂಬಂಧಿರು ನಿರಾಳರಾಗಿದ್ದಾರೆ.
ಇನ್ನು ಮಂಗಳವಾರ ಬೆಳಗ್ಗೆ ಮತ್ತೊಬ್ಬ ಶಂಕಿತರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಜಿಲ್ಲೆಯ ತರೀಕೆರೆ ಪಟ್ಟಣದ ಮಹಿಳೆಯೊಬ್ಬರು ಕಳೆದ ಮಾ.13ರಂದು ಮಕ್ಕಾದಿಂದ ಪಟ್ಟಣಕ್ಕೆ ಆಗಮಿಸಿದ್ದರು. ಮಂಗಳವಾರ ಈ ಮಹಿಳೆಯಲ್ಲಿ ಜ್ವರ, ಕೆಮ್ಮು ಕಾಣಿಸಿಕೊಂಡಿದೆ. ಕೂಡಲೇ ಅವರು ಜಿಲ್ಲಾಸ್ಪತ್ರೆಗೆ ಆಗಮಿಸಿ ವಿಶೇಷ ವಾರ್ಡ್ ದಾಖಲಾಗಿದ್ದಾರೆ. ತಪಾಸಣೆ ಮಾಡಿರುವ ವೈದ್ಯರು ವ್ಯಕ್ತಿಯ ರಕ್ತ ಹಾೂ ಗಂಟಲ ದ್ರವವನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ರವಾನಿಸಿದ್ದಾರೆ.
ಕೊರೋನ ವೈರಸ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇದುವರೆಗೆ ವಿದೇಶದಿಂದ ಆಗಮಿಸಿದ್ದ ನಾಲ್ವರು ಶಂಕಿತರನ್ನು ವೈದ್ಯರು ತಪಾಸಣೆ ಮಾಡಿದ್ದು, ನಾಲ್ವರ ಪೈಕಿ ಮೂವರು ಶಂಕಿತರಲ್ಲಿ ಕೊರೋನ ವೈರಸ್ ಸೋಂಕು ಇಲ್ಲ ಎಂಬುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದ್ದು, ಇನ್ನು ಓರ್ವರ ವೈದ್ಯಕೀಯ ಪರೀಕ್ಷಾ ವರದಿ ಇನ್ನಷ್ಟೇ ಬರಬೇಕಿದೆ.
ಕೊರೋನ ವೈರಸ್ ಸೋಂಕು ಶಂಕಿತರ ಪಟ್ಟಿ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಸಾರ್ವಜನಿಕರು ತೀವ್ರ ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಈ ಸಂಬಂಧ ಜಿಲ್ಲಾಳಿತ ಹಾೂ ಆರೋಗ್ಯ ಇಲಾಖೆ ಸಾರ್ವಜನಿರಲ್ಲಿ ಜನಜಾಗೃತಿ ಮೂಡಿಸುವ ಕೆಲಸವನ್ನು ಸಮರೋಪಾದಿಯಲ್ಲಿ ಮಾಡುತ್ತಿದ್ದು, ಈ ಮಧ್ಯೆ ಜಿಲ್ಲಾಡಳಿತ ವಿದೇಶದಿಂದ ಆಗಮಿಸಿರುವವರ ಮಾಹಿತಿ ಕಲೆ ಹಾಕುತ್ತಿದ್ದು, ಇಂತಹವರನ್ನು ಗುರುತಿಸಿ ಖುದ್ದು ಅವರ ಮನೆಗಳಿಗೆ ತೆರಳಿ ತಪಾಸಣೆ ಮಾಡುವ, ಜ್ವರ, ಶೀತ, ಕೆಮ್ಮಿನಿಂದ ಬಳಲುತ್ತಿದ್ದರೆ ಆಸ್ಪತ್ರೆಗೆ ದಾಖಲಿಸುವ ಕೆಲಸವನ್ನು ಮಾಡುತ್ತಿದೆ.
ಜಿಲ್ಲೆಯಲ್ಲಿ ಇದುವರೆಗೆ ವಿದೇಶದಿಂದ ಹಿಂದಿರುಗಿದ 48 ಜನರ ಮೇಲೆ ನಿಗಾವಹಿಸಲಾಗಿದೆ. ಈ ಪೈಕಿ 15 ಮಂದಿ ಮಂಗಳವಾರ ನೋಂದಣಿ ಮಾಡಿಕೊಂಡಿದ್ದು, ಇವರ ಮೇಲೆ ನಿಗಾವಹಿಸಿದ್ದು, ಮನೆಯಿಂದ ಹೊರ ಹೋಗದಂತೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ನಾಲ್ಕು ಶಂಕಿತ ಪ್ರಕರಣ ದಾಖಲಾಗಿದೆ. ಈ ಪೈಕಿ ಮೂವರದ್ದು, ನೆಗೆಟಿವ್ ವರದಿ ಬಂದಿದೆ. ಓರ್ವ ವ್ಯಕ್ತಿಯ ವರದಿ ಇನ್ನಷ್ಟೇ ಬರಬೇಕಿದೆ. ಸದ್ಯ ನಗರದ ಐಸೋಲೇಶನ್ ವಾರ್‌ನಲ್ಲಿ ಓರ್ವ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ.
-ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ







