ಕೊರೋನ ಎಫೆಕ್ಟ್: ದೇವಾಲಯದಲ್ಲಿ ಕೆಮ್ಮಿದ್ದಕ್ಕೆ ಆ್ಯಂಬುಲೆನ್ಸ್ ಕರೆಸಿದ ಜನ

ಸಾಂದರ್ಭಿಕ ಚಿತ್ರ
ಕಲಬುರ್ಗಿ, ಮಾ.17: ದೇವಾಲಯದಲ್ಲಿ ವ್ಯಕ್ತಿಯೋರ್ವ ಅತಿಯಾಗಿ ಕೆಮ್ಮಿದಕ್ಕೆ, ಆ್ಯಂಬುಲೆನ್ಸ್ ಕರೆಸಿ, ಆಸ್ಪತ್ರೆಗೆ ಕಳುಹಿಸಿರುವ ಘಟನೆ ಕಲಬುರಗಿಯಲ್ಲಿ ಜರುಗಿದೆ ಎಂದು ವರದಿಯಾಗಿದೆ.
ನಗರದ ಶರಣಬಸವೇಶ್ವರ ದೇವಸ್ಥಾನ ಬಳಿ ನಡೆದಿದ್ದು, ದೇವಸ್ಥಾನಕ್ಕೆ ಬಂದಿದ್ದ ವ್ಯಕ್ತಿ ಅತಿಯಾಗಿ ಕೆಮ್ಮಿದ್ದಕ್ಕೆ ಆತಂಕಗೊಂಡ ಜನರು ನೇರವಾಗಿ 108 ಆ್ಯಂಬುಲೆನ್ಸ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಆ್ಯಂಬುಲೆನ್ಸ್ ಸಿಬ್ಬಂದಿ, ಕೆಮ್ಮಿದ ವ್ಯಕ್ತಿಯನ್ನು ನಗರದ ಜಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.
ವ್ಯಕ್ತಿಯಲ್ಲಿ ಕೊರೋನ ಲಕ್ಷಣಗಳು ಕಂಡು ಬಂದಿಲ್ಲವಾದರೂ, ಅತಿಯಾಗಿ ಕೆಮ್ಮಿದ್ದಕ್ಕೆ ಗಾಬರಿಯಾದ ಜನರು ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
Next Story





