ಬೀದರ್: ಶಾಹೀನ್ ಸಂಸ್ಥೆಯಿಂದ ಉಚಿತ ನೀಟ್ ತರಬೇತಿ
ಬೀದರ್: ಇಲ್ಲಿಯ ಶಾಹೀನ್ ಶಿಕ್ಷಣ ಸಂಸ್ಥೆಯು ಜಿಲ್ಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವಾಗುವ ಉದ್ದೇಶದಿಂದ ಈ ಬಾರಿ ನೀಟ್ ಆನ್ಲೈನ್ ಉಚಿತ ತರಬೇತಿ ದೇಶದ್ಯಾಂತ ವಿದ್ಯಾರ್ಥಿಗಳಿಗೆ ನೀಡಲು ನಿರ್ಧರಿಸಿದೆ.
ವಿದ್ಯಾರ್ಥಿಗಳಿಗೆ ಎರಡು ಬಗೆಯ ಆನ್ಲೈನ್ ತರಬೇತಿ ನೀಡಲಾಗುವುದು. ಉಪಗ್ರಹ ಆಧಾರಿತ ಸರಣಿ ಪರೀಕ್ಷೆಗಳನ್ನು ನಡೆಸಲಿರುವ ಕಾರಣ ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತುಕೊಂಡೇ ಆನ್ಲೈನ್ ಮೂಲಕ ಪರೀಕ್ಷೆ ಬರೆಯಬಹುದು. ಒಎಂಆರ್ ಶೀಟ್ ಗಳ ಮೂಲಕ ಟೆಸ್ಟ್ ನಡೆಸಲಾಗುವುದು ಎಂದು ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ 40 ದಿನಗಳ ರೆಗ್ಯುಲರ್ ಕೋಚಿಂಗ್ ವ್ಯವಸ್ಥೆ ಮಾಡಲಾಗಿದೆ. ಮುಂಚೆ ಇದಕ್ಕೆ 5 ಸಾವಿರ ರೂ. ಶುಲ್ಕ ನಿಗದಿಪಡಿಸಲು ಉದ್ದೇಶಿಸಲಾಗಿತ್ತು. ಆದರೆ, ಇದೀಗ ಸಂಪೂರ್ಣ ಉಚಿತವಾಗಿ ಕೋಚಿಂಗ್ ನೀಡಲು ನಿರ್ಣಯಿಸಲಾಗಿದೆ. ಮೊದಲು ಕಾಲೇಜಿನಲ್ಲಿಯೇ ತರಬೇತಿ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿತ್ತು. ಕೊರೋನಾ ವೈರಸ್ ಪ್ರಯುಕ್ತ ರಜೆ ಘೋಷಣೆ ಮಾಡಿದ ಕಾರಣ ಆನ್ಲೈನ್ ಮೂಲಕ ಉಚಿತ ತರಬೇತಿ ನೀಡಲು ನಿರ್ಧರಿಸಲಾಗಿದೆ. ತರಬೇತಿಯು ವೈದ್ಯಕೀಯ ಮತ್ತಿತರ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ವಿದ್ಯಾರ್ಥಿಗಳಿಗೆ ನೆರವಾಗಲಿದೆ ಎಂದು ಹೇಳಿದ್ದಾರೆ.
ತರಬೇತಿಯು www.shaheengroup.org ನಲ್ಲಿ ಮಾರ್ಚ್ 23 ರಿಂದ ಆರಂಭವಾಗಲಿದೆ. ಆಸಕ್ತರು ಸಂಸ್ಥೆಯ ವೆಬ್ಸೈಟ್ ನಲ್ಲಿ ಹೆಸರು ನೋಂದಾಯಿಸಿ ಉಚಿತ ತರಬೇತಿಯ ಲಾಭ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.
ಶಾಹೀನ್ ಪದವಿಪೂರ್ವ ವಿಜ್ಞಾನ ಕಾಲೇಜು ಗುಣಮಟ್ಟದ ಶಿಕ್ಷಣ, ಉತ್ಕೃಷ್ಟ ನೀಟ್ ಹಾಗೂ ಸಿಇಟಿ ತರಬೇತಿಗೆ ಹೆಸರಾಗಿದೆ. ಕಳೆದ ಹಲವು ವರ್ಷಗಳಿಂದ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ವೈದ್ಯಕೀಯ ಆಯುರ್ವೇದ, ದಂತ ವೈದ್ಯಕೀಯ ಹಾಗೂ ಇತರ ಕೋರ್ಸ್ ಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.







