ಕೊರೋನ ಎಫೆಕ್ಟ್: ನೆಕ್ಕಿಲಾಡಿ ಸಂತೆ ರದ್ದು
ಉಪ್ಪಿನಂಗಡಿ: ಕೊರೋನ ವೈರಸ್ ಹಿನ್ನೆಲೆಯಲ್ಲಿ 34 ನೆಕ್ಕಿಲಾಡಿಯಲ್ಲಿ ಗುರುವಾರ ನಡೆಯುವ ವಾರದ ಸಂತೆಯನ್ನು ರದ್ದುಗೊಳಿಸಲಾಗಿದೆ.
ಕೊರೋನ ವೈರಸ್ ಹರಡದಂತೆ ಮುಂಜಾಗೃತ ಕ್ರಮಕ್ಕಾಗಿ ಸರಕಾರದ ನಿರ್ದೇಶನದಂತೆ 34 ನೆಕ್ಕಿಲಾಡಿಯಲ್ಲಿ ವಾರದ ಪ್ರತಿ ಗುರುವಾರ ನಡೆಯಬೇಕಿದ್ದ ಸಂತೆಯನ್ನು ಸರಕಾರದ ಮುಂದಿನ ನಿರ್ದೇಶನದವರೆಗೆ ರದ್ದುಗೊಳಿಸಿ 34 ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ಜಯಪ್ರಕಾಶ್ ಆದೇಶಿಸಿದ್ದಾರೆ.
Next Story





