ಕೊರೋನಾ: ಉಪ್ಪಿನಂಗಡಿ ದೇವಾಲಯದಲ್ಲಿ ಸೇವೆ ರದ್ದು
ಉಪ್ಪಿನಂಗಡಿ : ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಗಯಾಪದ ಕ್ಷೇತ್ರ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ಎಲ್ಲಾ ಸೇವೆಗಳನ್ನು ರದ್ದುಗೊಳಿಸಿದ್ದು, ದರುಷನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಶ್ರೀ ಕ್ಷೇತ್ರವು ಮುಕ್ತಿಧಾಮವಾಗಿದ್ದು, ಪಿಂಡ- ಪ್ರಧಾನಾದಿ ಸದ್ಗತಿ ಕಾರ್ಯಗಳಿಗೆ ಪ್ರಸಿದ್ಧಿ ಪಡೆದಿದೆ. ಆದ್ದರಿಂದ ಕೇವಲ ಪಿಂಡ ಪ್ರಧಾನ ಮಾಡಲು ಮಾತ್ರ ಇಲ್ಲಿ ಅವಕಾಶ ನೀಡಲಾಗಿದ್ದು, ದೇವಾಲಯದ ಸಭಾಂಗಣದಲ್ಲಿ ಉತ್ತರ ಕ್ರಿಯೆಯ ಊಟವನ್ನು ನಿಷೇಧಿಸಿದೆ. ಉಳಿದಂತೆ ಎಲ್ಲಾ ಸೇವೆಗಳು ರದ್ದುಗೊಂಡಿದೆ. ಕೊರೋನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ಈ ಕ್ರಮ ಕೈಗೊಂಡಿ ದ್ದಾಗಿ ಶ್ರೀ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಹರಿಶ್ಚಂದ್ರ ತಿಳಿಸಿದ್ದಾರೆ.
Next Story





