ಮಾ.22ರವರೆಗೆ ಮಂಗಳೂರು-ವಿಜಯಪುರ ರೈಲು ಸ್ಥಗಿತ

ಸಾಂದರ್ಭಿಕ ಚಿತ್ರ
ಮಂಗಳೂರು, ಮಾ.18: ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗದ ಕುಡ್ಗಿ-ಮುಲ್ವಾಡ್ ರೈಲು ನಿಲ್ದಾಣಗಳ ನಡುವಿನ ಏಕಪಥ ರೈಲುಹಳಿ ದುರಸ್ತಿ ಕಾಮಗಾರಿ ಚಾಲನೆಯಲ್ಲಿದೆ. ಇದರಿಂದ ಮಂಗಳೂರು-ವಿಜಯಪುರ ರೈಲು ಸಂಚಾರವು ಮಾ.19ರಿಂದ 22ರವರೆಗೆ ಸ್ಥಗಿತಗೊಂಡಿದೆ.
ವಿಜಯಪುರದಿಂದ ಮಂಗಳೂರು ಜಂಕ್ಷನ್ಗೆ ಪ್ರತಿದಿನ ಆಗಮಿಸುವ ತತ್ಕಾಲ್ ರೈಲು (ಟ್ರೇನ್ ನಂ. 07327) ಹಾಗೂ ಮಂಗಳೂರು ಜಂಕ್ಷನ್ ನಿಂದ ವಿಜಯಪುರಕ್ಕೆ ತೆರಳುವ ರೈಲುಗಳನ್ನು (07328) ಮಾ.22ರವರೆಗೆ ರದ್ದುಗೊಳಿಸಲಾಗಿದೆ.
ಮಂಗಳೂರು-ಮಡಗಾಂವ್ ರೈಲು ರದ್ದು
ಮಂಗಳೂರು ಸೆಂಟ್ರಲ್ ಹಾಗೂ ಮಡಗಾಂವ್ ನಡುವಿನ ರೈಲುಗಳ ಸಂಚಾರವನ್ನು ಮಾ.19ರಿಂದ 31ರವರೆಗೆ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಮಂಗಳೂರು ಸೆಂಟ್ರಲ್ನಿಂದ ಪ್ರಯಾಣ ಬೆಳೆಸಲಿರುವ ಮಂಗಳೂರು ಸೆಂಟ್ರಲ್- ಮಡಗಾಂವ್ ಇಂಟರ್ಸಿಟಿ ಎಕ್ಸ್ಪ್ರೆಸ್ (ಟ್ರೇನ್ ನಂ.22636) ರೈಲು ಹಾಗೂ ಮಡಗಾಂವ್ನಿಂದ ಮಂಗಳೂರು ಸೆಂಟ್ರಲ್ಗೆ ಆಗಮಿಸುವ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲ್ನ್ನು (22635) ಮಾ.31ರವರೆಗೆ ರದ್ದುಗೊಳಿಸಲಾಗಿದೆ ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ.ಕೆ. ಗೋಪಿನಾಥ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







