ಆಲಿಂಗನ, ಫೋನ್ ಕರೆ ಅಗತ್ಯ: ಪೋಪ್
ಕೊರೊನಾ ವೈರಸ್ ಭೀತಿ

ವ್ಯಾಟಿಕನ್ ಸಿಟಿ, ಮಾ. 18: ಕೊರೋನವೈರಸ್ ಸೋಂಕಿನಿಂದಾಗಿ ಪ್ರತ್ಯೇಕವಾಗಿ ಇರಬೇಕಾಗಿ ಬರುವ ಸಂದರ್ಭಗಳಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಪರಸ್ಪರ ಆಲಿಂಗಿಸಿಕೊಳ್ಳುವುದು ಮತ್ತು ಫೋನ್ ಕರೆಗಳನ್ನು ಮಾಡುವುದು ಅಗತ್ಯವಾಗಿದೆ ಎಂದು ಪೋಪ್ ಫ್ರಾನ್ಸಿಸ್ ಬುಧವಾರ ಹೇಳಿದ್ದಾರೆ.
‘‘ನಮ್ಮ ನಡುವೆ ಇರುವ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಬಗ್ಗೆ ಇಂಥ ಸಣ್ಣ ಆಂಗಿಕ ಭಾವನೆಗಳನ್ನು ತೋರಿಸುವ ಸಣ್ಣ ಸಣ್ಣ ಕೆಲಸಗಳನ್ನು ನಾವು ಮಾಡಬೇಕು’’ ಎಂದು ‘ಲಾ ರಿಪಬ್ಲಿಕ’ ಪತ್ರಿಕೆಯೊಂದಿಗೆ ಮಾತನಾಡಿದ 83 ವರ್ಷದ ಪೋಪ್ ಹೇಳಿದರು.
‘‘ಇವುಗಳು ಮಮತೆ, ಪ್ರೀತಿ ಮತ್ತು ಅನುಕಂಪದ ಸಂಕೇತಗಳಾಗಿವೆ’’ ಎಂದು ಅವರು ನುಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಜನರು ಇತರರಿಗಿಂತ ಕನಿಷ್ಠ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಕೊರೋನವೈರಸ್‌ಗಾಗಿ ಇಟಲಿ ರೂಪಿಸಿದ ಹೊಸ ನಿಯಮಗಳು ಹೇಳುತ್ತವೆ. ಆದರೆ, ಜನರು ಮನೆಯಲ್ಲಿ ಏನು ಮಾಡಬಹುದು ಎನ್ನುವುದನ್ನು ಅವು ಹೇಳುವುದಿಲ್ಲ.
Next Story





