ಕೋರ್ಗಿ: ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಕುಂದಾಪುರ, ಮಾ.18: ಕೊರ್ಗಿ ಗ್ರಾಪಂ ವ್ಯಾಪ್ತಿಯಲ್ಲಿ ಬೂತ್ ಸಂಘಟನಾ ಅಭಿಯಾನ ಕಾರ್ಯಕ್ರಮದ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಇತ್ತೀಚೆಗೆ ಕೊರ್ಗಿಯ ಹಳೆಯಮ್ಮ ದೇವಸ್ಥಾನದ ಬಳಿಯ ಗೋಪಾಲ ಶೆಟ್ಟಿ ಹೊಸಮಠ ಅವರ ನಿವಾಸದಲ್ಲಿ ಆಯೋಜಿಸಲಾಗಿತ್ತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಂದಿನ ಚುನಾವಣೆಯಲ್ಲಿ ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಕಾರ್ಯಕರ್ತರನ್ನು ಸಂಪೂರ್ಣ ವಾಗಿ ತೊಡಗಿಸಿಕೊಂಡು ಪಕ್ಷ ಬಲವರ್ಧನೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಕುಂದಾಪುರದ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಯಾಡಿ ಶಿವರಾಮ ಶೆಟ್ಟಿ ಮಾತನಾಡಿ, ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಗೆ ಬೂತ್ ಮಟ್ಟದಲ್ಲಿ ಯುವ ಕಾರ್ಯಕರ್ತರನ್ನು ಹೆಚ್ಚು ಹೆಚ್ಚು ಸಂಘಟಿಸಿ ಪಕ್ಷ ಬಲ ವರ್ಧನೆಗೆ ಸಹಕರಿಸಲಾುವುದು ಎಂದರು.
ಕೊರ್ಗಿ ಗ್ರಾಪಂಗೆ ಉಸ್ತುವಾರಿ ಕೇಶವ ಎಂ.ಕೋಟ್ಯಾನ್ ಅಧ್ಯಕ್ಷತೆ ವಹಿಸಿ ದ್ದರು. ವೀಕ್ಷಕರಾದ ಜಯ ಶೆಟ್ಟಿ ಬನ್ನಂಜೆ, ಸ್ಥಳೀಯ ಕಾಂಗ್ರೆಸ್ ಮುಖಂಡ ಗೋಪಾಲ ಶೆಟ್ಟಿ ಹೊಸಮಠ, ಮಾಜಿ ಸದಸ್ಯರುಗಳಾದ ಪ್ರಕಾಶ್ ಶೆಟ್ಟಿ, ಮಹಾಬಲ ಮೊಗವೀರ ಗಣಪತಿ, ಸದಸ್ಯರಾದ ಗಿರಿಜಾ, ಸಂತೋಷ ಮೊಗವೀರ, ದಿನೇಶ ಮೊಗವೀರ, ದೀಕ್ಷಿತ್ ಶೆಟ್ಟಿ ಕೋರ್ಗಿ, ಶ್ರೀನಿವಾಸ್ ಶೆಟ್ಟಿ ಹೊಸಮಠ, ಪ್ರಕಾಶ್ ಶೆಟ್ಟಿ ಸೂಣಾರಿ ಮೊದಲಾದವರು ಉಪಸ್ಥಿತರಿದ್ದರು.







