ಮೋದಿ ಸರಕಾರದಿಂದ ನ್ಯಾಯಾಂಗದ ಸ್ವಾತಂತ್ರ್ಯ ಶಿಥಿಲ: ಸಿಪಿಎಂ
ಉಡುಪಿ, ಮಾ.18: ಮೋದಿ ಸರಕಾರ ಇತ್ತೀಚೆಗೆ ನಿವೃತ್ತರಾದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಅವರನ್ನು ರಾಜ್ಯ ಸಭೆಯ ಸದಸ್ಯರಾಗಿ ನಾಮಕರಣ ಮಾಡಿರುವುದಕ್ಕೆ ಸಿಪಿಐ(ಎಂ) ಬೈಂದೂರು ವಲಯ ಮಿತಿ ಆಕ್ಷೇಪವನ್ನು ವ್ಯಕ್ತಪಡಿಸಿದೆ.
ಈ ನಡೆಯ ಮೂಲಕ ಮೋದಿ ಸರಕಾರ ನ್ಯಾಯಾಂಗದ ಸ್ವಾತಂತ್ರ್ಯವನ್ನು ಯಾವುದೇ ನಾಚಿಕೆಯಿಲ್ಲದೆ ಶಿಥಿಲಗೊಳಿಸಿದೆ. ಪ್ರಭುತ್ವದ ಅಂಗಗಳ ಅಧಿಕಾರ ಗಳನ್ನು ಪ್ರತ್ಯೇಕಗೊಳಿಸಿರುವ ನಮ್ಮ ಸಂವಿಧಾನಿಕ ವ್ಯವಸ್ಥೆಯ ಅನುಲ್ಲಂಘನೀಯ ನೀತಿಯನ್ನು ಈ ಮೂಲಕ ಬುಡಮೇಲು ಮಾಡಲಾಗಿದೆ. ಆದ್ದರಿಂದ ರಾಷ್ಟ್ರಪತಿ ಗಳು ಗೊಗೊಯ್ ಅವರ ನಾಮಕರಣವನ್ನು ಹಿಂದಕ್ಕೆ ಪಡೆಯಬೇಕು ಎಂದು ಸಿಪಿಎಂ ಆಗ್ರಹಿಸಿದೆ.
Next Story





