ಅಕ್ರಮ ಗೋಮಾಂಸ ಸಾಗಾಟ: ಓರ್ವನ ಸೆರೆ
ಕುಂದಾಪುರ, ಮಾ.18: ಕಂಡ್ಲೂರು ಪೇಟೆಯ ಕನ್ನಡ ಶಾಲೆ ಬಳಿ ಮಾ.17 ರಂದು ರಾತ್ರಿ ವೇಳೆ ಮಾರುತಿ 800 ಕಾರಿನಲ್ಲಿ ಅಕ್ರಮ ಗೋವಿನ ಮಾಂಸ ಸಾಗಾಟ ಮಾಡುತ್ತಿದ್ದ ಓರ್ವನನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಹೈಕಾಡಿಯ ಮಹಮ್ಮದ್ ಅತೀರ್(21) ಎಂದು ಗುರುತಿಸ ಲಾಗಿದೆ.
ಪೊಲೀಸ್ ದಾಳಿ ವೇಳೆ ಕಾರಿನಲ್ಲಿದ್ದ ಮುಕ್ತೀಯಾರ್, ಕರಣಿ ಸಪಾನ್, ನೂರುಲ್ಲಾ ಎಂಬವರು ಪರಾರಿಯಾಗಿದ್ದಾರೆ. ಬಂಧಿತನಿಂದ ಕಾರು, 40 ಕೆಜಿ ಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





