ಪ್ರತ್ಯೇಕ ಪ್ರಕರಣ: ಇಬ್ಬರ ಆತ್ಮಹತ್ಯೆ
ಉಡುಪಿ, ಮಾ.18: ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದ ಆಟೋ ರಿಕ್ಷಾ ಚಾಲಕ, ಅಂಬಲಪಾಡಿ ಪಂದುಬೆಟ್ಟು ನಿವಾಸಿ ದೇವರಾಜ ಪೂಜಾರಿ (62) ಎಂಬವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಮಾ.18ರಂದು ಬೆಳಿಗ್ಗೆ ಮನೆಯ ಬಳಿಯ ಸನ್ಮಾನ್ ಐಸ್‌ಪ್ಲಾಂಟಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಕಾರ್ಕಳ ಕಾವೇರಡ್ಕ ನಿವಾಸಿ ನಾರಾಯಣ ಪೂಜಾರಿ(65) ಎಂಬವರು ಇದೇ ಕಾರಣ ದಿಂದ ಜೀವನದಲ್ಲಿ ಜುಗುಪ್ಸೆ ಹೊಂದಿ ಮಾ.17ರಂದು ರಾತ್ರಿ ಮನೆಯ ಎದುರಿನ ಅಡಿಕೆ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





