ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಿಕೆ
ಉಡುಪಿ, ಮಾ.18: ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ವತಿಯಿಂದ ಮಾ.23ರಂದು ನಡೆಯಲು ನಿಗದಿಯಾಗಿದ್ದ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕೊರೋನ ವೈರಸ್‌ನ ಭೀತಿಯ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಸಂಘಟಕರು ತಿಳಿಸಿದ್ದರು.
ಒಂದು ಲಕ್ಷ ರೂ.ನಗದು ಬಹುಮಾನ ನಿಧಿ ಇರುವ ಈ ಪ್ರತಿಷ್ಠಿತ ಪ್ರಶಸ್ತಿಗೆ ಈ ಬಾರಿ ನಾಡಿನ ಖ್ಯಾತ ಇತಿಹಾಸಕಾರ ಹಾಗೂ ಪುರಾತತ್ವ ಸಂಶೋಧಕ ಡಾ.ಅ.ಸುಂದರ್ ಆಯ್ಕೆಯಾಗಿದ್ದರು.
Next Story





