ಕಾಪು ಬೀಚ್‍ಗೆ ನಿರ್ಬಂಧ: ನಂದಿಕೂರಿನಲ್ಲಿ ಸರಳ ರಥೋತ್ಸವ

ಕಾಪು: ಜಿಲ್ಲೆಯ ಪ್ರವಾಸಿ ಕೇಂದ್ರಗಳಲ್ಲಿ ಒಂದಾಗ ಕಾಪು ಬೀಚ್‍ಗೆ ಬುಧವಾರದಿಂದ ನಿರ್ಬಂಧ ವಿಧಿಸಲಾಗಿದೆ.
ಉಡುಪಿ ಡಿಸಿಯವರ ಆದೇಶದಂತೆ ಪ್ರವಾಸಿಗರಿಗೆ ಬೀಚ್ ಪ್ರವೇಶ ನಿರ್ಬಂಧಿಸಲಾಗಿದ್ದು ಈ ಬಗ್ಗೆ ಕಾಪು ಪುರಸಭೆ ಕಟ್ಟುನಿಟ್ಟಾಗಿ ಅದೇಶ ಜಾರಿಗೊಳಿಸಿದ್ದು, ಬೀಚ್‍ಗೆ ಪ್ರವೇಶವಿಲ್ಲ ಎಂಬ ಫಲಕವನ್ನು ಅಳವಡಿಸಲಾಗಿದೆ.
ಕೊರೊನಾ ವೈರಾಣು ಖಾಯಿಲೆ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾಪು ಪುರಸಭೆ ವ್ಯಾಪ್ತಿಯಲ್ಲಿ ಜರಗುವ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಜಾತ್ರೆಗಳು, ಸಭೆ ಸಮಾರಂಭಗಳು, ಸಾಂಸ್ಕøತಿಕ ಕಾರ್ಯಕ್ರಮಗಳು, ಸಂತೆ, ಜಾತ್ರೆ, ಉತ್ಸವ ಸಾಮೂಹಿಕ ವಿವಾಹ ಇನ್ನಿತರ ಜನಸಂದಣಿ ಕಾರ್ಯಕ್ರಮಗಳನ್ನು ಜಿಲ್ಲಾಧಿಕಾರಿ ಆದೇಶದಂತೆ ಬುಧವಾರದಿಂದ 144(3) ಸೆಕ್ಷನ್ ರಂತೆ ನಿರ್ಬಂಧಿಸಲಾಗಿದೆ ಎಂದು ಮುಖ್ಯಾಧಿಕಾರಿ ಪ್ರಕಟನೆ ತಿಳಿಸಿದೆ.
Next Story





