ಕೊರೋನವೈರಸ್: ಇಟಲಿಯಲ್ಲಿ ಒಂದೇ ದಿನ 475 ಮಂದಿ ಸಾವು

ರೋಮ್, ಮಾ. 18: ಇಟಲಿಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊರೋನವೈರಸ್‌ನಿಂದಾಗಿ 475 ಮಂದಿ ಮೃತಪಟ್ಟಿದ್ದಾರೆ ಎಂದು ದೇಶದ ನಾಗರಿಕ ರಕ್ಷಣಾ ಇಲಾಖೆ ತಿಳಿಸಿದೆ.
ಇದರೊಂದಿಗೆ ದೇಶದಲ್ಲಿ ಸಾಂಕ್ರಾಮಿಕದಿಂದಾಗಿ ಮೃತಪಟ್ಟವರ ಸಂಖ್ಯೆ 2,978ಕ್ಕೆ ಏರಿದೆ. ಇಟಲಿಯಲ್ಲಿನ ಒಟ್ಟು ಕೊರೋನವೈರಸ್ ಪೀಡಿತರ ಸಂಖ್ಯೆ 27,980ರಿಂದ 31,506ಕ್ಕೆ ಏರಿದೆ.
Next Story





