Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಚುನಾವಣಾ ಆಯೋಗ ಮತ್ತು ಭಾರತದ...

ಚುನಾವಣಾ ಆಯೋಗ ಮತ್ತು ಭಾರತದ ಪ್ರಜಾತಂತ್ರದ ಭವಿಷ್ಯ

ಸುರೇಶ್ ಭಟ್ ಬಾಕ್ರಬೈಲ್ಸುರೇಶ್ ಭಟ್ ಬಾಕ್ರಬೈಲ್18 March 2020 11:18 PM IST
share
ಚುನಾವಣಾ ಆಯೋಗ ಮತ್ತು ಭಾರತದ ಪ್ರಜಾತಂತ್ರದ ಭವಿಷ್ಯ

ಕೆಲವು ವರ್ಷಗಳಿಂದೀಚೆಗೆ ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಕೆಲವೊಂದು ವಿದ್ಯಮಾನಗಳು ವಿಶ್ವದ ಮಾದರಿ ಪ್ರಜಾಪ್ರಭುತ್ವ ಎಂದು ಕರೆಯಲಾದ ಪ್ರಜಾಸತ್ತೆಗೆ ಕಳಂಕ ತರುವ ರೀತಿಯಲ್ಲಿವೆ. ಇವು ನಮ್ಮ ಪ್ರಜಾತಂತ್ರ ಇನ್ನಷ್ಟು ಗಟ್ಟಿಮುಟ್ಟಾಗಬೇಕೆಂದು ಆಶಿಸುತ್ತಿರುವವರ ಮನಸ್ಸಿನಲ್ಲಿ ಹಲವೊಂದು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ. ಭಾರತೀಯ ಚುನಾವಣಾ ಆಯೋಗ ಆಳುವ ಸರಕಾರಗಳ ಬಾಲಂಗೋಚಿಯಂತಾಗುತ್ತಿದೆಯೇ? ಆಯೋಗ ನಿಧಾನಕ್ಕೆ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆಯೇ? ಆಯೋಗ ತೆಗೆದುಕೊಳ್ಳುವ ಮತ್ತು ತೆಗೆದುಕೊಳ್ಳದ ಕೆಲವೊಂದು ನಿರ್ಧಾರಗಳು ಹಾಗೂ ಕ್ರಮಗಳು ಮತ್ತು ಅದರ ಕೆಲವೊಂದು ವರ್ತನೆಗಳು ಅದರ ವಿಶ್ವಾಸಾರ್ಹತೆಗೆ ಧಕ್ಕೆ ಉಂಟುಮಾಡುತ್ತಿವೆಯೇ? ಇದೆಲ್ಲ ನಿಜವೆಂದಾದರೆ ಆಯೋಗ ಇನ್ನು ಕೊಂಚವೂ ತಡಮಾಡಬಾರದು. ತನ್ನ ವಿಶ್ವಾಸಾರ್ಹತೆಯನ್ನು ಮರಳಿ ಪಡೆಯುವುದಕ್ಕೋಸ್ಕರ ಅಗತ್ಯವಿರುವ ಸೂಕ್ತ ಕ್ರಮಗಳನ್ನು ಅದು ಈಗಿಂದೀಗಲೇ ಪ್ರಾರಂಭಿಸಬೇಕಾಗಿದೆ.

ಮತದಾನ ಪ್ರಕ್ರಿಯೆಯಲ್ಲಿ ಪ್ರಜೆಗಳ ಅದರಲ್ಲೂ ವಿಶೇಷವಾಗಿ ಸಾಮಾನ್ಯಪ್ರಜೆಗಳ ಭಾಗವಹಿಸುವಿಕೆ ಸಾಕಷ್ಟು ಉತ್ತಮವಾಗುವಂತೆ ನೋಡಿಕೊಳ್ಳುವಲ್ಲಿ ಆಯೋಗ ತಕ್ಕಮಟ್ಟಿನ ಯಶಸ್ಸು ಗಳಿಸಿರುವುದರಲ್ಲಿ ಸಂಶಯವಿಲ್ಲ. ಆದರೆ ಅಭ್ಯರ್ಥಿಗಳ ವಿಷಯಕ್ಕೆ ಬಂದರೆ ಬಿಳುಪಿನ ಮಧ್ಯೆ ಎದ್ದುಕಾಣುವ ಕಪ್ಪುಚುಕ್ಕೆಯೆಂದರೆ ಚುನಾವಣಾ ವೆಚ್ಚಗಳಲ್ಲಿ ಆಗಿರುವ ಭಾರೀ ಹೆಚ್ಚಳದ ಪರಿಣಾಮವಾಗಿ ಬಡ, ಅರ್ಹ ಅಭ್ಯರ್ಥಿಗಳು ಹೊರಗುಳಿಯುತ್ತಿದ್ದರೆ ಅತ್ತ ಧನಿಕರು ಮತ್ತು ಕ್ರಿಮಿನಲ್ ಅಭ್ಯರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ಈ ಎರಡನೇ ವರ್ಗದವರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಪ್ರಧಾನ ಕಾರಣವೆಂದರೆ ಚುನಾವಣೆಗಳ ಕಾಲದಲ್ಲಿ ಮತದಾರರಿಗೆ ಹಣ ಮತ್ತಿತರ ಆಮಿಷಗಳ ಒಡ್ಡುವಿಕೆಗಳನ್ನೊಳಗೊಂಡಂತೆ ನಡೆಯುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ತಡೆಯುವಲ್ಲ್ಲಿ ಆಯೋಗ ಹೆಚ್ಚುಕಡಿಮೆ ಸಂಪೂರ್ಣವಾಗಿ ಸೋತಿದೆ. ಆಯೋಗದ ವತಿಯಿಂದ ನಡೆಯುವ ದಾಳಿಗಳು ಹಿಮಗಡ್ಡೆಯ ತುತ್ತತುದಿ ಮಾತ್ರ ಎನ್ನುವುದು ಬಹಳ ಸ್ಪಷ್ಟವಿದೆ! ದಿಡ್ಡಿ ಅಥವಾ ಹಿಂದಿನ ಬಾಗಿಲು ತೆರೆದಿರುವಾಗ ಪಕ್ಷಗಳ, ಅಭ್ಯರ್ಥಿಗಳ ಚುನಾವಣಾ ವೆಚ್ಚಗಳಿಗೆ ಮಿತಿ ಹೇರುವುದರಿಂದ ಏನು ಪ್ರಯೋಜನ ಹೇಳಿ. ವಾಸ್ತವವಾಗಿ ಭ್ರಷ್ಟಾಚಾರದ ಅಥವಾ/ಮತ್ತು ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಅಭ್ಯರ್ಥಿಗಳ ಮೇಲಿರುವ ಪ್ರಕರಣ/ಗಳು ಎಫ್‌ಐಆರ್ ಹಂತದಿಂದ ಆರೋಪಪಟ್ಟಿ ಹಂತಕ್ಕೆ ತಲುಪಿರುವ ಸಂದರ್ಭಗಳಲ್ಲಿ ಅಂತಹವರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ಕೊಡಲೇಬಾರದು. ಪಕ್ಷಗಳು ಮತ್ತು ಅಭ್ಯರ್ಥಿಗಳ ವೆಚ್ಚಗಳಲ್ಲಿ ಪಾರದರ್ಶಕತೆ ಇರಬೇಕೆಂದು ಹೇಳುವ ಚುನಾವಣಾ ಆಯೋಗ ಮೋದಿ ಸರಕಾರದ ಸಂಪೂರ್ಣ ಅಪಾರದರ್ಶಕ ಚುನಾವಣಾ ಬಾಂಡುಗಳ ಯೋಜನೆಯನ್ನು ಯಾಕೆ ದಿಟ್ಟವಾಗಿ ವಿರೋಧಿಸಲಿಲ್ಲ ಎನ್ನುವುದು ಈಗಲೂ ಮಿಲಿಯನ್ ಡಾಲರ್ ಪ್ರಶ್ನೆಯೇ ಆಗಿ ಉಳಿದಿದೆ.

ಭಾರತದ ಮತದಾರರಿಂದು ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ಸಂಶಯದ ದೃಷ್ಟಿಯಿಂದ ನೋಡತೊಡಗಿದ್ದಾರೆ. ಅತ್ತ ಮುಂದುವರಿದ ದೇಶಗಳು ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ಯಾವತ್ತೋ ತಿರಸ್ಕರಿಸಿ ಮತಚೀಟಿಗಳನ್ನು ಅಳವಡಿಸಿಕೊಂಡಿವೆ. ಹೀಗಿರುವಾಗ ನಾವೂ ಅದನ್ನೇ ಮಾಡಿದಾಗಷ್ಟೇ ಜನರಿಗೆ ಮತದಾನ ಪ್ರಕ್ರಿಯೆ ಬಗ್ಗೆ ಹೆಚ್ಚು ವಿಶ್ವಾಸ ಮೂಡಲು ಸಾಧ್ಯ. ಚುನಾವಣಾ ಹಂತಗಳ ವಿಷಯಕ್ಕೆ ಸಂಬಂಧಿಸಿದಂತೆಯೂ ಜನರಲ್ಲಿ ಅನುಮಾನಗಳು ಮೂಡತೊಡಗಿವೆ. ಕೆಲವು ಸಂದರ್ಭಗಳಲ್ಲಿ ಹಂತಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಆಯೋಗವು ಆಳ್ವಿಕರ ಒತ್ತಡ ಮತ್ತು ಪ್ರಭಾವಗಳಿಗೆ ತಲೆಬಾಗುತ್ತಿರುವಂತೆ ತೋರುತ್ತಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ. ಇಂತಹ ಅನುಮಾನಗಳಿಗೆ ಅವಕಾಶವಿರದಂತೆ ನಡೆದುಕೊಳ್ಳುವುದು ಆಯೋಗದ ಕರ್ತವ್ಯವಾಗಿದೆ.

ಇನ್ನು ದ್ವೇಷದ ಭಾಷಣಗಳ ವಿಷಯಕ್ಕೆ ಬಂದರೆ ಚುನಾವಣಾ ಆಯೋಗದ ವೈಫಲ್ಯ ಕಣ್ಣಿಗೆ ರಾಚುವಂತಿದೆ. ಚುನಾವಣಾ ಪ್ರಚಾರದ ಕಾಲದಲ್ಲಿ ಯಾವನೇ/ಯಾವಳೇ ಅಭ್ಯರ್ಥಿ ದ್ವೇಷದ ಮಾತು ಶುರುಮಾಡಿದ ತಕ್ಷಣ ಭಾಷಣದೊಂದಿಗೆ ಸಭೆಯನ್ನು ಸಹ ನಿಲ್ಲಿಸುವ ಮತ್ತು ಅಂತಹ ಅಭ್ಯರ್ಥಿಯನ್ನು ಅನರ್ಹಗೊಳಿಸಿ ಆತ/ಆಕೆಯನ್ನು ಅರೆಸ್ಟ್ ಮಾಡಿ ಸೂಕ್ತ ಪ್ರಕರಣ ದಾಖಲಿಸುವುದರೊಂದಿಗೆ ಕನಿಷ್ಠ ಎರಡು ಅಥವಾ ಮೂರು ಚುನಾವಣಾ ಪ್ರಕ್ರಿಯೆಗಳಿಂದ ಹೊರಗಿಡುವ ಅಧಿಕಾರ ಆಯೋಗಕ್ಕೆ ಇರಬೇಕು.

ಆಯೋಗದ ವತಿಯಿಂದ ಅತ್ಯಂತ ಕಠಿಣ ನಿಯಂತ್ರಣ ಬೇಕಾಗಿರುವ ಇನ್ನೊಂದು ಕ್ಷೇತ್ರವೆಂದರೆ ಸಾಮಾಜಿಕ ಮಾಧ್ಯಮ. ಚುನಾವಣೆಗಳ ಕಾಲದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಎಷ್ಟೊಂದು ದುರುಪಯೋಗಪಡಿಸಲಾಗುತ್ತಿದೆ ಎಂಬುದನ್ನು ನಾವೆಲ್ಲರೂ ಬಲ್ಲೆವು. ಆನ್‌ಲೈನ್ ವ್ಯವಹಾರಗಳಲ್ಲಿ ಅನೇಕ ಮೋಸಗಳು ನಡೆಯುತ್ತಿರುವುದರಿಂದ ಆಧಾರ್ ಕಾರ್ಡ್ ಆಧಾರಿತ ಆನ್‌ಲೈನ್ ಮತದಾನದ ಪ್ರಸ್ತಾಪವನ್ನು ಆಯೋಗ ಕೈಬಿಡುವುದು ಕ್ಷೇಮಕರ. ಭಾರತದ ಸಂಸತ್ತಿನಲ್ಲಿ ಕೂರುವ ವ್ಯಕ್ತಿಗಳ ಮೇಲೆ ಇಡೀ ದೇಶಕ್ಕೆ ಸಂಬಂಧಿಸಿದ ಶಾಸನಗಳನ್ನು ಮಾಡುವ ಮತ್ತು ತಂತಮ್ಮ ಕ್ಷೇತ್ರದ ಎಲ್ಲಾ ಜನರ ಸಮಸ್ಯೆಗಳನ್ನು ಪರಿಹರಿಸುವ ಪವಿತ್ರ ಕರ್ತವ್ಯವನ್ನು ನಿಭಾಯಿಸುವ ಹೊಣೆಗಾರಿಕೆ ಇದೆ.

ಆದುದರಿಂದ ಅರ್ಹ, ಜನಪರ, ಜವಾಬ್ದಾರಿಯುತ, ಪ್ರಾಮಾಣಿಕ ವ್ಯಕ್ತಿಗಳು ಮಾತ್ರ ಲೋಕಸಭೆ, ರಾಜ್ಯಸಭೆಗಳಲ್ಲಿ ಕೂರುವಂತಾಗಬೇಕು. ಇದನ್ನು ನೂರಕ್ಕೆ ನೂರರಷ್ಟು ಖಾತ್ರಿಪಡಿಸುವುದಕ್ಕೆ ಏನೆಲ್ಲಾ ಸುಧಾರಣೆಗಳು ಬೇಕಾಗಿವೆಯೋ ಅವೆಲ್ಲವನ್ನೂ ಆಯೋಗ ಈ ಕೂಡಲೇ ಕೈಗೆತ್ತಿಕೊಳ್ಳಬೇಕು. ಇದಕ್ಕೆ ಈಗಿರುವುದಕ್ಕಿಂತಲೂ ಹೆಚ್ಚಿನ ಸ್ವಾಯತ್ತತೆ ಬೇಕಾಗಿರುವುದರಿಂದ ಆಯೋಗ ಅದಕ್ಕಾಗಿ ಒತ್ತಾಯಿಸಬೇಕು ಮತ್ತು ತನ್ನ ಪ್ರಸ್ತಾಪಗಳನ್ನು ಜನರ ಮುಂದಿಟ್ಟು ಅವರ ಬೆಂಬಲವನ್ನೂ ಪಡೆದುಕೊಳ್ಳಬೇಕು. ಇಲ್ಲವಾದರೆ ಭಾರತದ ಪ್ರಜಾತಂತ್ರ ಇನ್ನಷ್ಟು ಅಧೋಗತಿಗಿಳಿಯುವುದರಲ್ಲಿ ಸಂಶಯವಿಲ್ಲ.

share
ಸುರೇಶ್ ಭಟ್ ಬಾಕ್ರಬೈಲ್
ಸುರೇಶ್ ಭಟ್ ಬಾಕ್ರಬೈಲ್
Next Story
X