ಹಕ್ಕಿಜ್ವರ: ಮೈಸೂರಿನಲ್ಲಿ ಮುಂದುವರಿದ ಪಕ್ಷಿಗಳ ಮಾರಣಹೋಮ

ಸಾಂದರ್ಭಿಕ ಚಿತ್ರ
ಮೈಸೂರು,ಮಾ.18: ನಗರದ ಕುಂಬಾರಕೊಪ್ಪಲಿನಲ್ಲಿ ಹಕ್ಕಿಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಈ ವ್ಯಾಪಿಯ ಪಕ್ಷಿಗಳ ಮಾರಣಹೋಮ ಇಂದು ಸಹ ಮುಂದುವರಿದಿದೆ.
ನಗರದ ಮೇಟಗಳ್ಳಿ, ಬಿ.ಎಂ.ಶ್ರೀ ನಗರ, ಅಂಬೇಡ್ಕರ್ ಜ್ಞಾನ ಲೋಕ, ಕುಂಬಾರಕೊಪ್ಪಲು ಮತ್ತು ಹೆಬ್ಬಾಳುಗಳಲ್ಲಿ ಗುರುತಿಸಲಾದ 989 ವಿವಿಧ ಜಾತಿಯ ಕೋಳಿಗಳು ಮತ್ತು ಪಕ್ಷಿಗಳನ್ನು ಕೊಲ್ಲಲಾಯಿತು. ಇದರಲ್ಲಿ ಮಾಂಸದ ಕೋಳಿಗಳು 304, ಮೊಟ್ಟೆ ಕೋಳಿಗಳು 160, ನಾಟಿ ಕೋಳಿ ಮರಿಗಳು 173, ಪ್ರಾಯದ ನಾಟಿಕೋಳಿಗಳು 326, ಮುದ್ದು ಪಕ್ಷಿಗಳು 20 ಮತ್ತು ಟರ್ಕಿಗಳು 06 ಸೇರಿದಂತೆ ಒಟ್ಟು 989 ಪಕ್ಷಿಗಳನ್ನು ಕೊಲ್ಲಲಾಗಿದೆ.
ಮೈಸೂರು ಮಹಾನಗರ ಪಾಲಿಕೆ ಮತ್ತು ಪಶು ಇಲಾಖೆ ಜಂಟಿಯಾಗಿ ಇಂದು ಸಹ ರ್ಯಾಪಿಡ್ ರೆಸ್ಪಾನ್ಸ್ ತಂಡಗಳು ಕಾರ್ಯಚರಣೆ ನಡೆಸಿ ಹಕ್ಕಿಜ್ವರ ಹರಡುವುದನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದಾರೆ.
ಇತ್ತೀಚೆಗೆ ಕುಂಬಾರಕೊಪ್ಪಲಿನ ಸ್ಮಶಾನದಲ್ಲಿ ಕೊಕ್ಕರೆಯೊಂದು ಸಾವನ್ನಪ್ಪಿತ್ತು. ರಾಮಣ್ಣ ಎಂಬುವವರ ಮನೆಯಲ್ಲಿ ಹತ್ತಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿದ್ದವು. ಇದರ ಸ್ಯಾಂಪಲ್ಗಳನ್ನು ಪರೀಕ್ಷೆಗೆ ಕಳುಹಿಸಿದಾಗ ಹಕ್ಕಿಜ್ವರದಿಂದ ಸಾವನ್ನಪ್ಪಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಜಿಲ್ಲಾಡಳಿತ ಕುಂಬಾರಕೊಪ್ಪಲಿನ 1ಕಿ.ಮೀ ವ್ಯಾಪ್ತಿಯ ಎಲ್ಲಾ ಪಕ್ಷಿಗಳನ್ನು ಕಲ್ಲಿಂಗ್ ಮಾಡಲು ನಿರ್ಧರಿಸಿ ಮಂಗಳವಾರ 4100 ಕೋಳಿಗಳನ್ನು ಕೊಲ್ಲಲಾಗಿತ್ತು.
ಇದರ ಮುಂದುವರೆದ ಭಾಗವಾಗಿ ಒಟ್ಟು 6436 ಪಕ್ಷಿಗಳನ್ನು ಗುರುತಿಸಲಾಗಿದ್ದು, ನಿನ್ನೆ 4100 ಮತ್ತು ಇಂದು 989 ಪಕ್ಷಿಗಳನ್ನು ಕೊಲ್ಲಲಾಗಿದೆ.







