ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ, ಸಂಯುಕ್ತ ಜಮಾಅತ್ ಪದಾಧಿಕಾರಿಗಳ ತುರ್ತು ಸಭೆ
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಮತ್ತು ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಇದರ ಪದಾಧಿಕಾರಿಗಳ ಜಂಟಿ ತುರ್ತು ಸಭೆಯು ಒಕ್ಕೂಟದ ಹಿರಿಯ ಉಪಾಧ್ಯಕ್ಷ ಹಾಜಿ. ಅಬ್ದುಲ್ಲಾಹ್ ಪರ್ಕಳ ಇವರ ಅಧ್ಯಕ್ಷತೆಯಲ್ಲಿ ಮಸ್ಜಿದ್ ಎ ಮಣಿಪಾಲದಲ್ಲಿ ಗುರುವಾರ ನಡೆಯಿತು.
ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಜುಮಾ ನಮಾಝ್ ಅನ್ನು ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಅತೀ ಶೀಘ್ರದಲ್ಲಿ ಮುಗಿಸುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಮಕ್ಕಳು, ಹಿರಿಯರು ಮತ್ತು ಮಹಿಳೆಯರು ಮನೆಯಲ್ಲಿಯೇ ನಮಾಝ್ ನಿರ್ವಹಿಸುವಂತೆ ಕೋರಲಾಗಿದೆ. ಇದು ತಾತ್ಕಾಲಿಕ ಕ್ರಮವಾಗಿದ್ದು ಮುಂದಿನ ಆದೇಶದ ತನಕ ಜಾರಿಯಲ್ಲಿರುವುದು.
ಇದು ಉಡುಪಿ ಜಿಲ್ಲೆಯಾದ್ಯಂತ ಸರ್ವ ಮಸೀದಿಗಳ ಆಡಳಿತ ಸಮಿತಿಯ ಗಮನಕ್ಕೆ ತರುವುದಕ್ಕಾಗಿ ಪ್ರಕಟಿಸಲಾಗಿದೆ.
ಸಭೆಯಲ್ಲಿ ಒಕ್ಕೂಟದ ಹಿರಿಯ ಉಪಾಧ್ಯಕ್ಷರಾದ ಹಾಜಿ. ಅಬ್ದುಲ್ಲಾ ಪರ್ಕಳ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ, ಕೋಶಾಧಿಕಾರಿ ಎಸ್ ಕೆ. ಇಕ್ಬಾಲ್ ಮತ್ತು ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಪಿ ಅಬೂಬಕರ್, ಸಂಘಟನಾ ಕಾರ್ಯದರ್ಶಿ ಅಬ್ದರ್ರಹ್ಮಾನ್ ಕಲ್ಕಟ್ಟ ರಿಝ್ವಿ ಮತ್ತು ಇತರ ಜಮಾಅತ್ ನ ಪದಾಧಿಕಾರಿಗಳು, ಮಸೀದಿಯ ಖತೀಬರುಗಳು ಉಪಸ್ಥಿತರಿದ್ದರು.







