ಕೊರೋನ ವೈರಸ್ ಸೋಂಕು: ಭಾರತದಲ್ಲಿ ಸಾವಿನ ಸಂಖ್ಯೆ 4ಕ್ಕೆ ಏರಿಕೆ

ಹೊಸದಿಲ್ಲಿ, ಮಾ.19: ಮಹಾಮಾರಿ ಕೊರೋನ ವೈರಸ್ ಸೋಂಕಿನಿಂದ ಪಂಜಾಬ್ ನಲ್ಲಿ ಒಬ್ಬರು ಬಲಿಯಾಗಿದ್ದಾರೆ. ಇದರೊಂದಿಗೆ ಭಾರತದಲ್ಲಿ ಕೊರೋನ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿದೆ.
ಪಂಜಾಬ್ ನ ನವಾನ್‌ಶಹರ್ ನಿವಾಸಿ ಬಾಲ್ದೇವ್ ಸಿಂಗ್ (70) ಮೃತಪಟ್ಟ ವ್ಯಕ್ತಿ. ಅವರು ಜರ್ಮನಿಯಿಂದ ಇಟಲಿ ಮೂಲಕ ಭಾರತಕ್ಕೆ ಹಿಂದಿರುಗಿದ್ದರು . ಬಾಲ್ದೇವ್ ಸಿಂಗ್ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಬುಧವಾರ ಎದೆನೋವಿನ ಕಾರಣದಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಅವರನ್ನು ಪರೀಕ್ಷಿಸಿದಾಗ ಅವರಿಗೆ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ.
ಭಾರತದಲ್ಲಿ ಈ ವರೆಗೆ ಕೊರೋನ ವೈರಸ್ ಸೋಂಕು ಬಾಧಿತರ ಸಂಖ್ಯೆ 167ಕ್ಕೆ ಏರಿದೆ. ಇದರಲ್ಲಿ 25 ಮಂದಿ ವಿದೇಶಿಯರು ಸೇರಿದ್ದಾರೆ.
ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕರ್ನಾಟಕ, ದಿಲ್ಲಿ ಮತ್ತು ಮಾಹಾರಾಷ್ಟ್ರದಲ್ಲಿ ತಲಾ ಒಬ್ಬರು ಕೊರೋನದಿಂದ ಮೃತಪಟ್ಟಿದ್ದಾರೆ.
ಪ್ರಪಂಚದಲ್ಲಿ 2 ಲಕ್ಷ ಮಂದಿಗೆ ಕೊರೋನ ವೈರಸ್ ಸೋಂಕು ತಗಲಿದೆ. 8,000 ಮಂದಿ ಈ ವರೆಗೆ ಬಲಿಯಾಗಿದ್ದಾರೆ. ಚೀನಾದಲ್ಲಿ 80,800 ಮತ್ತು ಇಟಲಿಯಲ್ಲಿ 27,900 ಮಂದಿಗೆ ಕೊರೋನ ವೈರಸ್ ಸೋಂಕು ಬಾಧಿಸಿದೆ.







