ಜನತಾ ಕರ್ಫ್ಯೂ: ಸೂಕ್ತ ಮಾಹಿತಿ ನೀಡಲು ಕಾರ್ಯಕರ್ತರಿಗೆ ಶಾಸಕ ಮನವಿ
ಮಂಗಳೂರು, ಮಾ.20: ಜಗತ್ತಿನಾದ್ಯಂತ ಭೀತಿ ಹುಟ್ಟಿಸಿರುವ ಕೊರೋನ ವೈರಸ್ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿಯ ಕರೆಯಂತೆ ರವಿವಾರ ನಡೆಸಲಾಗುವ ‘ಜನತಾ ಕರ್ಫ್ಯೂ’ನಲ್ಲಿ ಕೈಜೋಡಿಸಲು ಮತ್ತು ಬಿಜೆಪಿ ಕಾರ್ಯಕರ್ತರು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ಮನವಿ ಮಾಡಿದ್ದಾರೆ.
ಕೊರೋನ ವೈರಸ್ ವ್ಯಾಪಕವಾಗದಂತೆ ಪ್ರಧಾನಿ ನರೇಂದ್ರ ಮೋದಿ ಕರೆಗೊಟ್ಟಿರುವ ‘ಜನತಾ ಕರ್ಫ್ಯೂ’ ಆಂದೋಲನದಲ್ಲಿ ಪ್ರತಿಯೊಬ್ಬ ನಾಗರಿಕರೂ ಪಾಲ್ಗೊಳ್ಳಬೇಕು ಎಂದು ವಿನಂತಿಸಿದ್ದಾರೆ.
Next Story





