Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಭುಜದ ನೋವನ್ನು ಕಡೆಗಣಿಸಬೇಡಿ: ಅದು ಈ ಆರು...

ಭುಜದ ನೋವನ್ನು ಕಡೆಗಣಿಸಬೇಡಿ: ಅದು ಈ ಆರು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು

ವಾರ್ತಾಭಾರತಿವಾರ್ತಾಭಾರತಿ20 March 2020 9:39 PM IST
share
ಭುಜದ ನೋವನ್ನು ಕಡೆಗಣಿಸಬೇಡಿ: ಅದು ಈ ಆರು ಗಂಭೀರ ಕಾಯಿಲೆಗಳ ಸಂಕೇತವಾಗಿರಬಹುದು

ಭುಜಗಳಲ್ಲಿ ನೋವು ಬರುವುದು ಸಾಮಾನ್ಯ, ಆದರೆ ಅದು ನಮಗೆ ತಿಳಿದಿರದ ಯಾವುದೋ ಕಾಯಿಲೆಯನ್ನು ಸೂಚಿಸಬಹುದು. ಅಪಘಾತ ಅಥವಾ ಪೆಟ್ಟಿನಿಂದ ಭುಜದ ನೋವು ಉಂಟಾಗಬಹುದು. ಭುಜವು ಹುಮೆರಸ್(ಭುಜಾಸ್ಥಿ),ಕ್ಲಾವಿಕಲ್ (ಕತ್ತಿನ ಮೂಳೆ) ಮತ್ತು ಸ್ಕಾಪುಲಾ (ಹೆಗಲಿನ ಮೂಳೆ) ಹೀಗೆ ಮೂರು ಮುಖ್ಯ ಮೂಳೆಗಳನ್ನು ಒಳಗೊಂಡಿರುತ್ತದೆ. ಈ ಮೂಳೆಗಳಿಗೆ ಮೆತ್ತೆಯಂತೆ ಮೃದ್ವಸ್ಥಿಯ ಪದರವಿರುತ್ತದೆ. ಶ್ರಮದ ಕೆಲಸದಿಂದ ಹಿಡಿದು ಕ್ರೀಡೆಗಳವರೆಗೆ ಹಲವಾರು ಕಾರಣಗಳಿಂದ ಭುಜಕ್ಕೆ ಪೆಟ್ಟಾಗುತ್ತಿರುತ್ತದೆ. ಭುಜದ ಪುನರಪಿ ಚಲನವಲನಗಳೂ ನೋವಿಗೆ ಕಾರಣವಾಗುತ್ತವೆ. ಆದರೆ ದೈಹಿಕ ಚಿಕಿತ್ಸೆಯ ಹೊರತಾಗಿಯೂ ನೋವಿನ ಲಕ್ಷಣಗಳು ಬಹಳ ಸಮಯ ಉಳಿದುಕೊಂಡಿದ್ದರೆ ಮತ್ತು ಯಾವುದೇ ಚೇತರಿಕೆ ಕಂಡುಬರದಿದ್ದರೆ ಅದು ಕಾಯಿಲೆಯೊಂದನ್ನು ಸೂಚಿಸಬಹುದು. ಭುಜದ ನೋವನ್ನುಂಟು ಮಾಡುವ ಆರು ಕಾಯಿಲೆಗಳ ಕುರಿತು ಮಾಹಿತಿಗಳಿಲ್ಲಿವೆ.....

►  ಕ್ಯಾನ್ಸರ್:

ಭುಜದ ನೋವು ಶ್ವಾಸಕೋಶ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಪ್ಯಾಂಕೋಸ್ಟ್,ಮೆಸೊಥೆಲಿಯೋಮಾ ಮತ್ತು ಮೆಟಾಸ್ಟಾಟಿಕ್ ಇವು ಶ್ವಾಸಕೋಶ ಕ್ಯಾನ್ಸರ್‌ನ ಹೆಚ್ಚು ಸಾಮಾನ್ಯ ವಿಧಗಳಾಗಿವೆ.

► ಪ್ಯಾಂಕೋಸ್ಟ್:

ಈ ವಿಧದ ಕ್ಯಾನ್ಸರ್‌ನಲ್ಲಿ ಶ್ವಾಸಕೋಶಗಳ ಮೇಲ್ಭಾಗದಲ್ಲಿರುವ ಸುಪೀರಿಯರ್ ಸಲ್ಕಸ್ ಎಂದು ಕರೆಯಲಾಗುವ ತೋಡಿನಂತಹ ಜಾಗದಲ್ಲಿ ಗಡ್ಡೆಗಳು ಬೆಳೆಯುತ್ತವೆ ಮತ್ತು ಸುಪೀರಿಯರ್ ಸಲ್ಕಸ್ ಭುಜಕ್ಕೆ ಹತ್ತಿರವಿರುವುದರಿಂದ ಪೀಡಿತ ಶ್ವಾಸಕೋಶವಿರುವ ಪಾರ್ಶ್ವದ ಭುಜದಲ್ಲಿ ತೀವ್ರ ನೋವನ್ನುಂಟು ಮಾಡುತ್ತವೆ.

► ಮೆಸೊಥೆಲಿಯೋಮಾ:

ಸುದೀರ್ಘ ಕಾಲ ಅಸಬೆಸ್ಟಸ್ ಅಥವಾ ಕಲ್ನಾರಿಗೆ ಒಡ್ಡಿಕೊಳ್ಳುವುದು ಈ ವಿಧದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಅಧ್ಯಯನವೊಂದರಲ್ಲಿ ಈ ವಿಧದ ಕ್ಯಾನ್ಸರ್ ಹೊಂದಿರುವವರ ಪೈಕಿ ಶೇ.14.3ರಷ್ಟು ಜನರಲ್ಲಿ ಭುಜದ ನೋವು ಮೊದಲ ಲಕ್ಷಣವಾಗಿತ್ತು ಎನ್ನುವುದು ಬೆಳಕಿಗೆ ಬಂದಿದೆ.

► ಮೆಟಾಸ್ಟಾಟಿಕ್:

 ಇದು ಶರೀರದ ಇತರ ಭಾಗಗಳಿಗೆ ಹರಡುವ ಕ್ಯಾನ್ಸರ್ ಆಗಿದೆ. ಮೂಳೆಗಳು ಮತ್ತು ದುಗ್ಧಗ್ರಂಥಿಗಳಂತಹ ಸಮೀಪದ ಜಾಗಗಳಿಗೆ ಈ ಕ್ಯಾನ್ಸರ್ ಹರಡಿದಾಗ ಭುಜದಲ್ಲಿ ನೋವು ಉಂಟಾಗುತ್ತದೆ. ಈ ಕ್ಯಾನ್ಸರ್ ಶರೀರದ ಯಾವ ಅಂಗವನ್ನು ಬಾಧಿಸಿದೆಯೋ ಅದಕ್ಕೆ ನಿರ್ದಿಷ್ಟವಾದ ಲಕ್ಷಣಗಳನ್ನು ತೋರಿಸುತ್ತದೆ. ಉದಾಹರಣೆಗೆ ಈ ಕ್ಯಾನ್ಸರ್ ಯಕೃತ್ತಿಗೆ ಹರಡಿದಾಗ ಜಾಂಡಿಸ್ ಅಥವಾ ಕಾಮಾಲೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

► ಹೃದಯಾಘಾತ:

ಹೃದಯದಲ್ಲಿರುವ ಅಪಧಮನಿಯಲ್ಲಿ ಉಂಟಾಗಿರುವ ತಡೆಯು ಮೈಯೊಕಾರ್ಡಿಯಲ್ ಇನ್ಫಾರ್ಕ್ಷನ್ ಎಂದು ಕರೆಯಲಾಗುವ ಹೃದಯದ ಸ್ನಾಯುವಿಗೆ ರಕ್ತದ ಹರಿವನ್ನು ನಿಲ್ಲಿಸಿದಾಗ ಅಥವಾ ಕಡಿಮೆಗೊಳಿಸಿದಾಗ ಭುಜದಲ್ಲಿ ನೋವು ಉಂಟಾಗುತ್ತದೆ. ಲಕ್ಷಣಗಳು ದಿಢೀರನೆ ಅಥವಾ ನಿಧಾನವಾಗಿ ಕಾಣಿಸಿಕೊಳ್ಳಬಹುದು. ಎದೆ ಬಿಗಿದಂತಹ ಅಥವಾ ಎದೆಯ ಮೇಲೆ ಒತ್ತಡವನ್ನು ಹೇರಿದಂತಹ ಅನುಭವ,ಬವಳಿ ಅಥವಾ ತಲೆ ಸುತ್ತುವಿಕೆ,ಕತ್ತು,ಭುಜಗಳು ಮತ್ತು ಒಂದು ಅಥವಾ ಎರಡೂ ತೋಳುಗಳಿಗೆ ಹರಡಿದ ಎದೆನೋವು,ಆಯಾಸ ಮತ್ತು ಉಸಿರಾಟದಲ್ಲಿ ತೊಂದರೆ ಇವು ಇಂತಹ ಲಕ್ಷಣಗಳಲ್ಲಿ ಸೇರಿವೆ.

► ಪಿತ್ತಗಲ್ಲು

ಪಿತ್ತಗಲ್ಲುಗಳು ಪಿತ್ತನಾಳದಲ್ಲಿ ತಡೆಯಿಂದಾಗಿ ಅಥವಾ ವ್ಯಕ್ತಿಯು ಕೊಬ್ಬು ಇರುವ ಆಹಾರವನ್ನು ಸೇವಿಸಿದಾಗ ತೀವ್ರ ನೋವನ್ನುಂಟು ಮಾಡುತ್ತವೆ. ಹೊಟ್ಟೆಯ ಮಧ್ಯಭಾಗದಲ್ಲಿ,ಬಲ ಭುಜದಲ್ಲ್ಲಿ ಅಥವಾ ಹೆಗಲ ಮೂಳೆಗಳ ನಡುವೆ ನೋವನ್ನುಂಟು ಮಾಡಬಹುದು. ಬಳಲಿಕೆ,ವಾಕರಿಕೆ ಅಥವಾ ವಾಂತಿ ಸಹ ಉಂಟಾಗಬಹುದು.

► ಆ್ಯಂಜಿನಾ

ಹೃದಯದ ಸುತ್ತಲಿನ ಮುಚ್ಚಿಹೋದ ಮತ್ತು ಸಂಕುಚಿತಗೊಂಡ ಅಪಧಮನಿಗಳಿಂದ ಉಂಟಾಗುವ ಎದೆನೋವನ್ನು ಆ್ಯಂಜಿನಾ ಎಂದು ಕರೆಯಲಾಗುತ್ತದೆ. ನೋವು ಎಡಭುಜದಲ್ಲಿ ಅಥವಾ ತೋಳಿನಲ್ಲಿಯೂ ಕಾಣಿಸಿಕೊಳ್ಳಬಲ್ಲದು. ಇದು ಹೃದಯಾಘಾತವಲ್ಲ, ಆದರೆ ವ್ಯಕ್ತಿಯು ಹೃದಯದ ಕಾಯಿಲೆಯನ್ನು ಹೊಂದಿರಬಹುದು ಎಂದು ಸೂಚಿಸುವ ಲಕ್ಷಣವಾಗಿದೆ. ದೈಹಿಕ ಚಟುವಟಿಕೆಯು ಈ ನೋವಿಗೆ ಕಾರಣವಾಗಬಹುದು,ಏಕೆಂದರೆ ವ್ಯಕ್ತಿಗೆ ಹೆಚ್ಚಿನ ಆಮ್ಲಜನಕದ ಅಗತ್ಯವಿರುತ್ತದೆ ಮತ್ತು ಹೃದಯದ ಸ್ನಾಯುಗಳು ಮುಚ್ಚಿರುವುದರಿಂದ ಸಾಕಷ್ಟು ಆಮ್ಲಜನಕ ಸಮೃದ್ಧ ರಕ್ತ ಪೂರೈಕೆಯಾಗುವುದಿಲ್ಲ.

► ಪ್ಯಾಂಕ್ರಿಯಾಟೈಟಿಸ್

ಪ್ಯಾಂಕ್ರಿಯಾಟೈಟಿಸ್ ಅಥವಾ ಮೇದೋಜ್ಜೀರಕ ಗ್ರಂಥಿಯ ಉರಿಯೂತವು ದೀರ್ಘಕಾಲಿಕ ಅಥವಾ ತೀವ್ರವಾಗಿರಬಹುದು. ಪ್ಯಾಂಕ್ರಿಯಾಟಿಸ್ ಅಥವಾ ಮೇದೋಜ್ಜೀರಕ ಗ್ರಂಥಿಯು ಜಠರದ ಹಿಂದುಗಡೆ ಮತ್ತು ಸಣ್ಣಕರುಳಿನ ಮೊದಲ ಭಾಗದ ಸಮೀಪ ಇರುತ್ತದೆ. ಅದು ಕರುಳಿನಲ್ಲಿ ಆಹಾರದ ವಿಭಜನೆಗೆ ನೆರವಾಗುವ ದ್ರವಗಳನ್ನು ಬಿಡುಗಡೆಗೊಳಿಸುತ್ತದೆ. ಅದು ಇನ್ಸುಲಿನ್ ಬಿಡುಗಡೆಗೊಳಿಸುವ ಮೂಲಕ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನೂ ನಿಯಂತ್ರಿಸುತ್ತದೆ. ಹೊಟ್ಟ್ಟೆಯ ಮೇಲ್ಭಾಗದಿಂದ ಬೆನ್ನು ಮತ್ತು ಭುಜದವರೆಗೆ ವ್ಯಾಪಿಸಬಹುದಾದ ನೋವು ಪ್ಯಾಂಕ್ರಿಯಾಟೈಟಿಸ್‌ನ ಲಕ್ಷಣಗಳಲ್ಲೊಂದಾಗಿದೆ.

► ಪಾರ್ಶ್ವಶೂಲೆ:

ಇದು ಶ್ವಾಸಕೋಶಗಳ ಆವರಣದ ಉರಿಯೂತವಾಗಿದೆ. ಅಂಗಾಂಶಗಳ ತೆಳು ಪದರವಾಗಿರುವ ಈ ಆವರಣವು ಶ್ವಾಸಕೋಶಗಳನ್ನು ಎದೆಯ ಭಿತ್ತಿಗಳಿಂದ ಪ್ರತ್ಯೇಕಿಸುತ್ತದೆ. ಶ್ವಾಸಕೋಶಗಳಲ್ಲಿ ವೈರಾಣು ಸೋಂಕು ಪಾರ್ಶ್ವಶೂಲೆಗೆ ಅತ್ಯಂತ ಸಾಮಾನ್ಯ ಕಾರಣವಾಗಿದೆ. ಭುಜದ ನೋವು,ಸ್ನಾಯು ಅಥವಾ ಸಂದು ನೋವು ಮತ್ತು ಉಸಿರಾಟದ ತೊಂದರೆ ಇವು ಸಾಮಾನ್ಯ ಲಕ್ಷಣಗಳಾಗಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X