ಅಮೆರಿಕ: ಸೆನೆಟ್‌ನಲ್ಲಿ ಟ್ರಿಲಿಯ ಡಾಲರ್ ಪ್ಯಾಕೇಜ್ ಮಂಡಿಸಿದ ಸರಕಾರ

ವಾಶಿಂಗ್ಟನ್, ಮಾ. 20: ಅಮೆರಿಕದಲ್ಲಿ ಕೊರೋನವೈರಸ್ ಸಾಂಕ್ರಾಮಿಕ ಸೃಷ್ಟಿಸಿರುವ ಆರ್ಥಿಕ ವಿಪ್ಲವವನ್ನು ಎದುರಿಸುವುದಕ್ಕಾಗಿ ಒಂದು ಟ್ರಿಲಿಯ ಡಾಲರ್ (ಸುಮಾರು 75 ಲಕ್ಷ ಕೋಟಿ ರೂಪಾಯಿ) ತುರ್ತು ಪರಿಹಾರ ಪ್ಯಾಕೇಜೊಂದನ್ನು ಸೆನೆಟ್ ಮೆಜಾರಿಟಿ ನಾಯಕ ಮಿಚ್ ಮೆಕಾನೆಲ್ ಗುರುವಾರ ಮಂಡಿಸಿದ್ದಾರೆ.
ರಿಪಬ್ಲಿಕನ್ ಪಕ್ಷ ಸಿದ್ಧಪಡಿಸಿದ ಕರಡು ಪ್ರತಿಯನ್ನು ಸೆನೆಟ್‌ನಲ್ಲಿರುವ ಪ್ರತಿಪಕ್ಷ ಡೆಮಾಕ್ರಟಿಕ್ ಸಂಸದರು ಪರಿಶೀಲಿಸಲಿದ್ದಾರೆ. ಬಳಿಕ, ಮತದಾನದ ದಿನಾಂಕವನ್ನು ನಿಗದಿಪಡಿಸಲಾಗುವುದು.
‘‘ಅತ್ಯಂತ ತುರ್ತು ಮತ್ತು ಅತ್ಯಂತ ಅಗತ್ಯದ ನಾಲ್ಕು ಆದ್ಯತೆಗಳ ಬಗ್ಗೆ ಶಾಸನವು ದಿಟ್ಟ ಕ್ರಮಗಳನ್ನು ತೆಗೆದುಕೊಂಡಿದೆ’’ ಎಂದು ಸೆನೆಟ್‌ನಲ್ಲಿ ಮಾತನಾಡಿದ ಮೆಕಾನೆಲ್ ತಿಳಿಸಿದರು.
Next Story





