ಉಡುಪಿ: ಮಾ. 22ರಂದು ಪೆಟ್ರೋಲ್ ಬಂಕ್‌ಗಳು ಬಂದ್
ಉಡುಪಿ, ಮಾ.20: ಕೊರೋನ ವೈರಸ್ ವಿರುದ್ಧದ ಸಮರದಲ್ಲಿ ದೇಶದ ಜನತೆ ಕೈಜೋಡಿಸಲು ಮಾ.22ರ ರವಿವಾರ ಬೆಳಗ್ಗೆ 7ರಿಂದ ರಾತ್ರಿ 9ಗಂಟೆ ಯವರೆಗೆ ಜನರು ಸ್ವಯಂಪ್ರೇರಣೆಯಿಂದ ಮನೆಯಲ್ಲೇ ಉಳಿದು ‘ಜನತಾ ಕರ್ಪ್ಯೂ’ ಆಚರಿಸುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಗೆ ಸ್ಪಂಧಿಸಿರುವ ಕರ್ನಾಟಕ ಸ್ಟೇಟ್ ಫೆಡರೇಷನ್ ಆಫ್ ಪೆಟ್ರೋಲಿಯಂ ಡೀಲರ್ಸ್, ಅಂದು ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ತಮ್ಮೆಲ್ಲಾ ರೀಟೆಲ್ ಔಟ್‌ಲೆಟ್‌ಗಳನ್ನು ಮುಚ್ಚುವಂತೆ ಡೀಲರ್‌ಗಳಿಗೆ ಮನವಿ ಮಾಡಿದ್ದಾರೆ.
ಆದರೆ ಪ್ರತಿಯೊಂದು ಬಂಕ್‌ಗಳಲ್ಲೂ ಒಬ್ಬ ಸಿಬ್ಬಂದಿ ಇರಲಿದ್ದು, ಆತ ತುರ್ತು ಸಂದರ್ಭಗಳಲ್ಲಿ ಪೊಲೀಸ್, ಅಂಬ್ಯುಲೆನ್ಸ್, ಅಗ್ನಿಶಾಮಕ ದಳದ ಸೇವೆ ಲಭ್ಯವಿರಲಿದ್ದಾರೆ ಎಂದು ಫೆಡರೇಷನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಬ್ಯೂಟಿಪಾರ್ಲರ್ ಬಂದ್: ಕೊರೋನ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಬ್ಯೂಟಿ ಪಾರ್ಲರ್‌ಗಳನ್ನು ಮಾ.31ರವರೆಗೆ ಮುಚ್ಚಲು ಉಡುಪಿಯ ಮಹಿಳಾ ಸೌಂದರ್ಯ ತಜ್ಞೆಯರ ಸಂಘ ನಿರ್ಧರಿಸಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.





