ಕನಿಕಾ ಪಾರ್ಟಿಯಲ್ಲಿ ಭಾಗಿಯಾದ ನಂತರ ರಾಷ್ಟ್ರಪತಿ, ಕೇಂದ್ರ ಸಚಿವರನ್ನು ಭೇಟಿಯಾಗಿದ್ದ ದುಷ್ಯಂತ್!
ಕೊರೊನಾವೈರಸ್ ಆತಂಕ

ಹೊಸದಿಲ್ಲಿ: ಕೊರೊನಾವೈರಸ್ ಸೋಂಕಿಗೊಳಗಾಗಿರುವ ಕನಿಕಾ ಕಪೂರ್ ಇದ್ದ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದ ಬಿಜೆಪಿ ಸಂಸದ ದುಷ್ಯಂತ್ ಸಿಂಗ್ ಈಗಾಗಲೇ ಸ್ವಯಂ ನಿರ್ಬಂಧದಲ್ಲಿದ್ದಾರೆ. ಆದರೆ ಇದಕ್ಕೂ ಮೊದಲು ಇವರು ಹಲವರು ಸಂಸದರು ಮಾತ್ರವಲ್ಲ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ರನ್ನೂ ಭೇಟಿಯಾಗಿದ್ದರು ಎಂದು ತಿಳಿದುಬಂದಿದೆ.
ಈಗಾಗಲೇ ದುಷ್ಯಂತ್ ಸಿಂಗ್ ಮತ್ತು ಅವರ ತಾಯಿ ವಸುಂಧರಾ ರಾಜೆ ಸ್ವಯಂ ನಿರ್ಬಂಧದಲ್ಲಿದ್ದಾರೆ. ದುಷ್ಯಂತ್ ರನ್ನು ಹಲವು ಸಂದರ್ಭಗಳಲ್ಲಿ ಭೇಟಿಯಾಗಿದ್ದ ಸಂಸದರು ಇದೀಗ ಸ್ವಯಂ ನಿರ್ಬಂಧಕ್ಕೆ ಮುಂದಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. 2 ದಿನಗಳ ಹಿಂದಷ್ಟೇ ದುಷ್ಯಂತ್ ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಹಲವು ಸಂಸದರ ಜೊತೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರನ್ನು ಭೇಟಿಯಾಗಿದ್ದರು.
ಈ ಸಂದರ್ಭ ಕೇಂದ್ರ ಸಚಿವ ರಾಜ್ಯವರ್ಧನ್ ರಾಥೋಡ್, ಬಿಜೆಪಿ ಸಂಸದೆ ಹೇಮಾಮಾಲಿನಿ, ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್, ಕಾಂಗ್ರೆಸ್ ನ ಕುಮಾರಿ ಸೆಲ್ಜಾ ಮತ್ತು ಮೇರಿ ಕೋಮ್ ಇದ್ದರು.
Next Story





