ಹಿಮಾಚಲ: ಧಾರ್ಮಿಕ ಸಭೆ ಆಯೋಜಿಸಿದವನ ವಿರುದ್ಧ ಎಫ್‌ಐಆರ್
ಹಾಮೀರ್‌ಪುರ(ಹಿ.ಪ್ರ.), ಮಾ.21: ದೇಶದಲ್ಲಿ ಎಲ್ಲೆಡೆ ಕೊರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ದಂಡಸಂಹಿತೆಯ ಸೆಕ್ಷನ್144 ನಿಷೇಧಾಜ್ಞೆ ಜಾರಿಗೊಳಿಸಿರುವ ಹೊರತಾಗಿಯೂ ಧಾರ್ಮಿಕ ಸಭೆಯನ್ನು ಆಯೋಜಿಸಿದ್ದನೆನ್ನಲಾದ ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸರು ಶನಿವಾರ ಎಫ್‌ಐಆರ್ ದಾಖಲಿಸಿದ್ದಾರೆ.
ಜಾಗರಣ್ ಎಂಬ ಧಾರ್ಮಿಕ ಸಭೆಯನ್ನು ಆಯೋಜಿಸಿದ್ದ ಅನು ಕುರುದ್ ಪ್ರದಶದ ಕ್ಷತಿ ಪ್ರಕಾಶ್ ಎಂಬವನ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆಯೆಂದು ಹಾಮೀರ್‌ಪುರದ ಪೊಲೀಸ್ ಅಧೀಕ್ಷಕ ಅರ್ಜಿತ್ ಸೇನ್ ಠಾಕೂರ್ ತಿಳಿಸಿದ್ದಾರೆ. ಆತನ ವಿರುದ್ಧ ಭಾರತೀಯ ದಂಡಸಂಹಿತೆಯ 188ರಡಿ ಸರಕಾರದ ಉದ್ಯೋಗಿಯು ಜಾರಿಗೊಳಿಸಿದ ಆದೇಶವನ್ನು ಪಾಲಿಸದ ಹಾಗೂ ಸೆಕ್ಷನ್ 144 ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ಆರೋಪಗಳನ್ನು ಹೊರಿಸಲಾಗಿದೆಯೆಂದು ಅವರು ಹೇಳಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಈಗಾಗಲೇ ಇಬ್ಬರು ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ.
Next Story





