ಲಿಕ್ಕರ್ ಕುಡಿದರೆ ಕೊರೋನ ವಾಸಿ ಆಗುತ್ತಾ?: ಸಚಿವ ಈಶ್ವರಪ್ಪ ಪ್ರಶ್ನೆ

ದಾವಣಗೆರೆ, ಮಾ.21: ಲಿಕ್ಕರ್ ಕುಡಿದರೆ, ಕೊರೋನ ವೈರಸ್ ಕಡಿಮೆ ಆಗುತ್ತಾ, ಇದನ್ನು ಎಲ್ಲೋ ಪತ್ರಿಕೆಯಲ್ಲಿ ಓದಿದ್ದೆ, ನಿಜನಾ, ಹೀಗೆ ಸಚಿವ ಕೆ.ಎಸ್.ಈಶ್ವರಪ್ಪ ಪತ್ರಕರ್ತರನ್ನು ಪ್ರಶ್ನಿಸಿದರು.
ಶನಿವಾರ ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕೊರೋನ ವೈರಸ್ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ನಾನು ಮದ್ಯ ಕುಡಿಯಲ್ಲ. ಆದರೂ, ಲಿಕ್ಕರ್ ಕುಡಿದರೆ ಸ್ವಲ್ಪ ಕೊರೋನ ವಾಸಿ ಆಗುತ್ತದೆ ಅಂತೆ ಹೌದೇ ಎಂದು ನುಡಿದರು.
ಲಿಕ್ಕರ್ ಕುಡಿದರೆ, ಕಡಿಮೆ ಆಗುವ ಕುರಿತು ವೈದ್ಯರು ಹೇಳಬೇಕು. ಅಲ್ಲದೆ, ಆಲ್ಕೋಹಾಲ್ ಅಂಶವಿದ್ದರೆ ಶೇ.40 ರಷ್ಟು ಸೋಂಕು ಕಡಿಮೆ ಎನ್ನುವ ಅಭಿಪ್ರಾಯವೂ ಇದೆ. ಮುಂದಕ್ಕೆ ಇದನ್ನೆಲ್ಲಾ ನೋಡೋಣ ಎಂದು ಈಶ್ವರಪ್ಪ ಹಾಸ್ಯ ಚಟಾಕಿ ಹಾರಿಸಿದರು.
Next Story





