ನ್ಯೂಯಾರ್ಕ್ ನಗರದಲ್ಲಿ ಬೀಗಮುದ್ರೆ

ನ್ಯೂಯಾರ್ಕ್, ಮಾ. 21: ನೂತನ-ಕೊರೋನವೈರಸ್ ರೋಗದ ಹರಡುವಿಕೆಯನ್ನು ತಡೆಯಲು, ಕ್ಯಾಲಿಫೋರ್ನಿಯದ ಬೆನ್ನಿಗೇ ನ್ಯೂಯಾರ್ಕ್‌ನಲ್ಲೂ ಶುಕ್ರವಾರ ಬೀಗಮುದ್ರೆ ಹಾಕಲಾಗಿದೆ.
ನ್ಯೂಯಾರ್ಕ್ ರಾಜ್ಯದಲ್ಲಿ ಅಗತ್ಯವಲ್ಲದ ಎಲ್ಲ ವ್ಯಾಪಾರ-ಉದ್ದಿಮೆಗಳು ಮುಚ್ಚಬೇಕು ಎಂದು ರಾಜ್ಯದ ಗವರ್ನರ್ ಆ್ಯಂಡ್ರೂ ಕುವೋಮೊ ಆದೇಶ ನೀಡಿದ್ದಾರೆ ಹಾಗೂ ಜನರು ಒಟ್ಟುಗೂಡುವುದನ್ನು ನಿಷೇಧಿಸಿದ್ದಾರೆ.
‘‘ಈಗ ನಾವೆಲ್ಲರೂ ದಿಗ್ಬಂಧನ (ಕ್ವಾರಂಟೈನ್)ದಲ್ಲಿದ್ದೇವೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಕುವೊಮೊ ಹೇಳಿದರು. ಬೀಗಮುದ್ರೆಯು ರವಿವಾರ ಸಂಜೆಯಿಂದ ಜಾರಿಗೆ ಬರುತ್ತದೆ.
ಅಮೆರಿಕದಲ್ಲಿ ಕೋವಿಡ್-19ರಿಂದ ಮೃತಪಟ್ಟವರ ಸಂಖ್ಯೆ 210ಕ್ಕೆ ಏರಿದಂತೆಯೇ ಬೀಗಮುದ್ರೆ ಘೋಷಿಸಲಾಗಿದೆ. ಈ ಸಂಖ್ಯೆಯು ಮೂರು ದಿನಗಳಲ್ಲಿ ದ್ವಿಗುಣವಾಗಿದೆ. 14,600ಕ್ಕೂ ಅಧಿಕ ಮಂದಿಗೆ ಸೋಂಕು ತಗಲಿರುವುದು ಖಚಿತಗೊಂಡಿದೆ.
Next Story





