ನನಗೆ ಯಾವುದೇ ಅನಾರೋಗ್ಯ, ಸೋಂಕು ತಗಲಿಲ್ಲ: ಖ್ಯಾತ ವೈದ್ಯ ಡಾ. ಮುಹಮ್ಮದ್ ಇಸ್ಮಾಯೀಲ್ ಸ್ಪಷ್ಟನೆ

ಡಾ. ಮುಹಮ್ಮದ್ ಇಸ್ಮಾಯೀಲ್ ಸ್ಪಷ್ಟನೆ
ಮಂಗಳೂರು, ಮಾ.22: ನಗರದ ವೈದ್ಯರೊಬ್ಬರಿಗೆ ಕೊರೋನ ವೈರಸ್ ಸೋಂಕು ತಗಲಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವದಂತಿಯೊಂದು ಹರಿದಾಡುತ್ತಿದ್ದು, ಇದೊಂದು ಸುಳ್ಳು ಸುದ್ದಿ ಎಂದು ತಿಳಿದು ಬಂದಿದೆ.
ಈ ಬಗ್ಗೆ ಖ್ಯಾತ ವೈದ್ಯ ಡಾ. ಮುಹಮ್ಮದ್ ಇಸ್ಮಾಯೀಲ್ ಅವರು ವೀಡಿಯೋಯೊಂದರಲ್ಲಿ ಸ್ಪಷ್ಟನೆ ನೀಡಿದ್ದು, ತಾನು ಆರೋಗ್ಯವಾಗಿದ್ದೇನೆ. ನನಗೆ ಯಾವುದೇ ಸೋಂಕು ತಗಲಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಂದಿರುವುದೆಲ್ಲ ಸುಳ್ಳು ಸುದ್ದಿ. ನಾನು ದೇವರ ದಯೆಯಿಂದ ಕ್ಷೇಮವಾಗಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Next Story





