ಔರಂಗಾಬಾದ್: ಕೊರೊನ ವೈರಸ್ ಸೋಂಕಿತ ಮಹಿಳೆ ಚೇತರಿಕೆ

ಮಹಾರಾಷ್ಟ್ರ, ಮಾ.21: ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಕೊರೊನ ವೈರಸ್ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಈಗ ಚೇತರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಶ್ಯ ಮತ್ತು ಕಝಕ್‌ಸ್ತಾನಕ್ಕೆ ಪ್ರವಾಸ ತೆರಳಿ ಮರಳಿದ್ದ ಈ ಮಹಿಳೆಗೆ ಸೋಂಕು ತಗುಲಿರುವುದು ಮಾರ್ಚ್ 13ರಂದು ದೃಢಪಟ್ಟಿತ್ತು. ಬಳಿಕ ಅವರಿಗೆ ನಾಲ್ಕು ಔಷಧಿಗಳನ್ನು ಸಂಯೋಜಿಸಿದ ಔಷಧಿ ನೀಡಿ ಚಿಕಿತ್ಸೆ ನಡೆಸಲಾಗಿದೆ. ಇತ್ತೀಚೆಗೆ ಅವರ ಗಂಟಲಿನ ದ್ರವದ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ. ಅವರನ್ನು ಈ ತಿಂಗಳಾಂತ್ಯದವರೆಗೆ ನಿಗಾ ವ್ಯವಸ್ಥೆಯಡಿ ಇರಿಸಿದ ಬಳಿಕ ಬಿಡುಗಡೆ ಮಾಡಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಇವರು ಉಪನ್ಯಾಸಕರಾಗಿರುವ ಕಾಲೇಜಿನ ಕನಿಷ್ಟ 21 ಮಂದಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದು ಎಲ್ಲವೂ ನೆಗೆಟಿವ್ ಆಗಿದೆ ಎಂದವರು ಹೇಳಿದ್ದಾರೆ.
Next Story





