ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆ; 65 ಮಂದಿ ಗೈರು
ಉಡುಪಿ, ಮಾ.21: ಜಿಲ್ಲೆಯಲ್ಲಿ ಶನಿವಾರ ನಡೆದ ದ್ವಿತೀಯ ಪಿಯುಸಿ ರಾಜ್ಯಶಾಸ್ತ್ರ (ಪೊಲಿಟಿಕಲ್ ಸೈನ್ಸ್) ಮತ್ತು ಸಂಖ್ಯಾಶಾಸ್ತ್ರ (ಸ್ಟ್ಯಾಟಿಸ್ಟಿಕ್ಸ್) ಪರೀಕ್ಷೆಗೆ ಒಟ್ಟು 65 ಮಂದಿ ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ.
ರಾಜ್ಯಶಾಸ್ತ್ರ ಪರೀಕ್ಷೆಗೆ ಹೆಸರು ನೊಂದಾಯಿಸಿದ್ದ 1744 ಮಂದಿ ವಿದ್ಯಾರ್ಥಿ ಗಳಲ್ಲಿ 55 ಮಂದಿ ಗೈರು ಹಾಜರಾಗಿದ್ದು, 1689 ಮಂದಿ ಪರೀಕ್ಷೆಗೆ ಹಾಜರಾ ಗಿದ್ದಾರೆ. ಅದೇ ರೀತಿ ಸಂಖ್ಯಾಶಾಸ್ತ್ರ ಪರೀಕ್ಷೆಗೆ 3153 ಮಂದಿ ವಿದ್ಯಾರ್ಥಿಗಳು ಹೆಸರು ನೊಂದಾಯಿಸಿದ್ದು, 10 ಮಂದಿ ಗೈರು ಹಾಜರಾಗಿ 3143 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಜಿಲ್ಲಾ ಪದವಿ ಪೂರ್ವ ಇಲಾಖೆಯ ಉಪ ನಿರ್ದೇಶಕ ಭಗವಂತ ಕಟ್ಟಿಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





