ಕೊರೋನ ವೈರಸ್: ದ.ಕ.ಜಿಲ್ಲೆಯಲ್ಲಿ 541 ಮಂದಿಯ ಸ್ಕ್ರೀನಿಂಗ್
ಮಂಗಳೂರು, ಮಾ.21: ಕೊರೋನ ವೈರಸ್ ಭೀತಿಯ ಹಿನ್ನಲೆಯಲ್ಲಿ ವಿದೇಶದಿಂದ ಆಗಮಿಸುವ ಪ್ರಯಾಣಿಕರ ಆರೋಗ್ಯ ತಪಾಸಣೆ ಕಾರ್ಯವನ್ನು ತೀವ್ರಗೊಳಿಸಲಾಗಿದ್ದು, ಶನಿವಾರ ದ.ಕ.ಜಿಲ್ಲೆಯಲ್ಲಿ 541 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ.
ಈವರೆಗೆ ಜಿಲ್ಲೆಯಲ್ಲಿ 1,987 ಮಂದಿಯನ್ನು ಅವರ ಮನೆಯಲ್ಲೇ ನಿಗಾದಲ್ಲಿರಿಸಲಾಗಿದೆ. ಇಎಸ್‌ಐ ಆಸ್ಪತ್ರ್ರೆಯಲ್ಲಿ 20 ಮಂದಿಯನ್ನು ವಿಶೇಷ ನಿಗಾದಲ್ಲಿರಿಸಲಾಗಿದೆ. ಶನಿವಾರ ಮತ್ತೆ 7 ಮಂದಿಯ ಗಂಟಲಿನ ದ್ರವವನ್ನು ಸ್ಯಾಂಪಲ್ ಟೆಸ್ಟ್ಗೆ ಹಾಸನದ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಈಗಾಗಲೆ ಕಳುಹಿಸಿದ ಸ್ಯಾಂಪಲ್ಗಳ ಪೈಕಿ 9 ಮಂದಿಯ ಸ್ಯಾಂಪಲ್ ವಾಪಸ್ ಬಂದಿದ್ದು, ಅವೆಲ್ಲದ ರಿಪೋರ್ಟ್ ನೆಗೆಟಿವ್ ಆಗಿದೆ.
ದ.ಕ.ಜಿಲ್ಲೆಯ ಆಶಾ ಕಾರ್ಯಕರ್ತೆಯರು ಈವರೆಗೆ 1,58,726 ಮನೆಗಳಿಗೆ ಭೇಟಿ ನೀಡಿ 6,23,944 ಮಂದಿಗೆ ಕೊರೋನ ವೈರಸ್ ತಡೆಗಟ್ಟಲು ವಿಶೇಷ ಜಾಗೃತಿ ಮೂಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
Next Story





