ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜನಜಾಗೃತಿ: ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ

ಮಂಗಳೂರು, ಮಾ.21: ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿಯ ವತಿಯಿಂದ ಕಾರ್ಪೊರೇಟರ್ ಲತೀಫ್ ಕಂದುಕ ಅವರ ನೇತೃತ್ವದಲ್ಲಿ ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ನಗರದ ಬಂದರ್ ಕಂದುಕದ ಬದ್ರಿಯಾ ಮಸೀದಿಯ ಆಸುಪಾಸು ಕರಪತ್ರ ಹಂಚಿಕೆ, ಸ್ಟಿಕ್ಕರ್ ಅಂಟಿಸುವಿಕೆ ಇತ್ಯಾದಿ ಮೂಲಕ ಜನಜಾಗೃತಿ ಕಾರ್ಯಕ್ರಮ ಶನಿವಾರ ಜರುಗಿತು.
ಈ ಸಂದರ್ಭ ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಬಂದರ್, ರೊಝಾರಿಯಾ ಚರ್ಚ್ ಪಾಲನಾ ಸಮಿತಿಯ ಗಿಲ್ಬರ್ಟ್ ಡಿಸಿಲ್ವ, ಬದ್ರಿಯಾ ಮಸೀದಿಯ ಆದಿಲ್, ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿಯ ಕೆಎಂ ಖಾಸಿಮ್, ಮನಪಾ ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಮಧು ಎಸ್. ಮನೋಹರ್, ಶಬರಿನಾಥ ರೈ, ಕಿರಣ್ ಕುಮಾರ್ ಮತ್ತಿತರಿದ್ದರು.












