ಎಪಿಡಿ ಫೌಂಡೇಶನ್‌ನಿಂದ ಶೌಚಾಲಯ ಹಸ್ತಾಂತರ

ಮಂಗಳೂರು, ಮಾ.22: ಆ್ಯಂಟಿ ಪೋಲ್ಯೂಷನ್ ಡ್ರೈವ್ ಫೌಂಡೇಶನ್ (ಎಪಿಡಿ ಪ್ರತಿಷ್ಠಾನ) 10 ಮತ್ತು 11ನೇ ಉಚಿತ ಶೌಚಾಲಯಗಳ ನಿರ್ಮಾಣದೊಂದಿಗೆ ತನ್ನ ‘ಪ್ರತಿ ಮನೆಗೆ ಶೌಚಾಲಯ’ (ಪಿಆರ್‌ಎಂಎಸ್) ಯೋಜನೆಯ ಮೊದಲ ಯಶಸ್ವಿ ವರ್ಷವನ್ನು ಇತ್ತೀಚೆಗೆ ಪೂರ್ಣಗೊಳಿಸಿದೆ.
ನಗರದ ಉರ್ವಸ್ಟೋರ್-ಅಶೋಕ್‌ನಗರ ಪ್ರದೇಶದಲ್ಲಿ ವಾಸಿಸುವ ಇಬ್ಬರು ಫಲಾನುಭಗಳಿಗಾಗಿ ನಿರ್ಮಿಸಿದ ಶೌಚಾಲಯಕ್ಕೆ ಲಯನ್ಸ್ ಕ್ಲಬ್ ಮಂಗಳೂರು-ಬಲ್ಮಠ ಭಾಗಶಃ ಹಣವನ್ನು ಒದಗಿಸಿದೆ. ಪರಿಸರದ ‘ಯೂತ್ ಫ್ರೆಂಡ್ಸ್’ ಯುವ ಸಂಘಟನೆಯ ಸದಸ್ಯರು ನಿರ್ಮಾಣ ಕಾರ್ಯದಲ್ಲಿ ಸ್ವಯಂಸೇವಕರಾಗಿ ಸಹಕರಿಸಿದ್ದರು. ಈ ಸಂದರ್ಭ ಲಯನ್ಸ್ ಕ್ಲಬ್ ಮಂಗಳೂರು-ಬಲ್ಮಠದ ಅಧ್ಯಕ್ಷ ಲಯನ್ ಜೆರ್ರಿ ಕ್ರಾಸ್ಟಾ, ಕಾರ್ಪೊರೇಟರ್ ಮನೋಜ್ ಕುಮಾರ್, ಲಯನ್ ಡಿಸ್ಟ್ರಿಕ್ಟ್ 317 ಡಿ ಲಯನ್ ಜಿಲ್ಲಾ ಸ್ವಚ್ ಭಾರತ್ ಸಂಯೋಜಕ ಲಯನ್ ನೋಯೆಲ್ ಎಫ್.ಸಿ. ಪಿಂಟೊ, ಲಯನ್ ಅಲ್ ಡಿಸೋಜ, ಎಪಿಡಿ ಫೌಂಡೇಶನ್ ನಿರ್ದೇಶಕ ಅರ್ಜುನ್ ರೈ, ಟೀಮ್ ಎಪಿಡಿ ಸದಸ್ಯರಾದ ವಾಣಿಶ್ರೀ, ಮೇಗನ್ ಡಿಸೋಜ ಮತ್ತು ಧನುಷ್ ದೇಸಾಯಿ ಉಪಸ್ಥಿತರಿದ್ದರು.
ಎಪಿಡಿಎಫ್ ಕಳೆದ ವರ್ಷದ ಮಾ.12ರಂದು ‘ಪ್ರತಿ ಮನೆಗೆ ಶೌಚಾಲಯ’ ಯೋಜನೆಯನ್ನು ಪ್ರಾರಂಭಿಸಿತು. ಇದು ಬಡತನ ರೇಖೆಗಿಂತ ಕೆಳಗಿರುವ ನಿರ್ಗತಿಕ ಕುಟುಂಬಗಳಿಗೆ ಉಚಿತ ಶೌಚಾಲಯಗಳನ್ನು ನಿರ್ಮಿಸುವ ಯೋಜನೆಯಾಗಿದೆ. ದ.ಕ. ಜಿಲ್ಲೆಯನ್ನು 2017ರಲ್ಲಿ ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿದ್ದರೂ, ಸಾಮಾಜಿಕ ಲೆಕ್ಕ ಪರಿಶೋಧನೆ (ಸೋಶಿಯಲ್ ಆಡಿಟ್)ಯಲ್ಲಿ ಜಿಲ್ಲೆಯಲ್ಲಿ 4,590 ಮನೆಗಳಲ್ಲಿ ತಮ್ಮದೇ ಆದ ಶೌಚಾಲಯಗಳಿಲ್ಲ ಎಂದು ತಿಳಿದುಬಂದಿತ್ತು. ಅದರಂತೆ ಕುಂಜತ್‌ಬೈಲ್‌ನಲ್ಲಿ ವೃದ್ಧೆಗೆ ನಿರ್ಮಿಸಲಾದ ಮೊದಲ ಶೌಚಾಲಯವನ್ನು ಹಸ್ತಾಂತರಿಸುವ ಮೂಲಕ ಪ್ರತಿ ಮನೆಗೆ ಸೌಚಾಲಯ ಯೋಜನೆಯನ್ನು ಕಳೆದ ವರ್ಷ ಉದ್ಘಾಟಿಸಲಾಯಿತು.
ಎಪಿಡಿಎಫ್ ಅಗತ್ಯವಿರುವ ಫಲಾನುಭವಿಗಳನ್ನು ನಿರಂತರವಾಗಿ ಗುರುತಿಸುತ್ತಿದೆ ಮತ್ತು ದಾನಿಗಳ ಸಹಾಯದಿಂದ ಶೌಚಾಲಯಗಳನ್ನು ಒದಗಿಸುತ್ತಿದೆ. 1 ವರ್ಷದಲ್ಲಿ 11 ಶೌಚಾಲಯಗಳನ್ನು ನಿರ್ಮಿಸಲು ಸಾಧ್ಯವಾಯಿತು. ಭವಿಷ್ಯದಲ್ಲಿ ಹೆಚ್ಚಿನ ನಿರ್ಗತಿಕ ಕುಟುಂಬಗಳನ್ನು ತಲುಪುವ ಯೋಜನೆ ಇದೆ. ಯೋಜನೆಗೆ ಕ್ರೌಡ್ ಫಂಡಿಂಗ್ ಪಡೆಯುವ ಸಲುವಾಗಿ ಎಪಿಡಿ ಫೌಂಡೇಶನ್ ಜನಪ್ರಿಯ ಸ್ಥಳಗಳಲ್ಲಿ ದೇಣಿಗೆ ನೀಡಲು ಡ್ರಾಪ್ ಬಾಕ್ಸ್ ಪೆಟ್ಟಿಗೆಗಳನ್ನು ಸ್ಥಾಪಿಸಿದೆ. ಡ್ರಾಪ್ ಬಾಕ್ಸ್‌ಗಳನ್ನು ಬೇಕರ್ಸ್ ಟ್ರೀಟ್, ಮಿಸ್ಬಾ ಸೂಪರ್ ಮಾರ್ಕೆಟ್, ಎಸ್.ಎಲ್.ಶೇಟ್ ಜ್ಯುವೆಲ್ಲರ್ಸ್, ಕಾಮತ್ ಕಂ, ಬಕ್ಲಾವಾ ಕಂಪನಿ, ಜೆರೋಸಾ ಕಂಪೆನಿ, ಲಾ ಪಿನೋಸ್ ಪಿಝ್ಝಾ, ಜಸ್ಟ್ ಜ್ಯೂಸ್ ಮತ್ತು ದಿ ಬೂಟಿಕ್ (ಸಿಟಿ ಸೆಂಟರ್), ಜ್ಯೂಸ್ ಜಂಕ್ಷನ್, ನೀಲಗಿರಿ ಸೂಪರ್ ಮಾರ್ಕೆಟ್ (ಎಂಪೈರ್ ಮಾಲ್), ಲಿಂಕನ್ ಕೆಫೆ ಮುಂತಾದ ಸ್ಥಳಗಳಲ್ಲಿರಿಸಲಾಗಿದೆ ಎಂದು ಎಪಿಡಿ ಪ್ರತಿಷ್ಠಾನದ ಸ್ಥಾಪಕ ಮತ್ತು ಸಿಇಒ ಅಬ್ದುಲ್ಲಾ ಎ. ರಹ್ಮಾನ್ ಹೇಳಿದ್ದಾರೆ.







