ದುಬೈಯಿಂದ 195 ಕನ್ನಡಿಗರನ್ನು ಬೆಂಗಳೂರಿಗೆ ಕರೆ ತಂದ ಸರಕಾರ
ಕೋವಿಡ್-19 ಲಕ್ಷಣಗಳಿದ್ದ ಆರು ಮಂದಿ ಪ್ರತ್ಯೇಕ ವಾರ್ಡ್‌ಗೆ ದಾಖಲು

ಬೆಂಗಳೂರು, ಮಾ.22: ದುಬೈನಲ್ಲಿದ್ದ 195 ಕನ್ನಡಿಗರನ್ನು ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ಇವರಲ್ಲಿ 6 ಜನರಿಗೆ ಕೋವಿಡ್-19 ಲಕ್ಷಣಗಳಿದ್ದರಿಂದ, ಅವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆಯ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಉಳಿದ ಪ್ರಯಾಣಿಕರನ್ನು, ಬೆಂಗಳೂರಿನ ಆಕಾಶ್ ವೈದ್ಯಕೀಯ ಸಂಸ್ಥೆಯ ಪ್ರತ್ಯೇಕಿಸಲ್ಪಟ್ಟ ವಾರ್ಡಿನಲ್ಲಿ ಸೇರಿಸಿ ನಿಗಾ ವಹಿಸಲಾಗಿದೆ ಎಂದು ಸಚಿವರು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇಂದು ಮನೆಯಿಂದಲೇ ಕೆಲಸ ಮಾಡುತ್ತಿರುವುದಾಗಿ ತಿಳಿಸಿರುವ ಆರೋಗ್ಯ ಸಚಿವರು, ಬೆಳಗ್ಗೆ ಇಲಾಖಾ ಅಧಿಕಾರಿಗಳೊಂದಿಗೆ ಮನೆಯಿಂದಲೇ ದೂರವಾಣಿ ಮುಖಾಂತರ ಮಾಹಿತಿ ವಿನಿಮಯ ಮಾಡಲಾಯಿತು ಎಂದು ಟ್ವೀಟ್ ಮಾಡಿದ್ದಾರೆ.
ಇಂದು ದುಬೈನಲ್ಲಿದ್ದ 195 ಕನ್ನಡಿಗರನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ಇವರಲ್ಲಿ 6 ಜನರಿಗೆ #Covid19 ಲಕ್ಷಣಗಳಿದ್ದರಿಂದ, ಇವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆಯ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ.
— B Sriramulu (@sriramulubjp) March 22, 2020







