ಕೊರೋನ ವೈರಸ್: ಸೇವಾ ನಿರತರಿಗೆ ಮಂಗಳೂರಿನಲ್ಲಿ 'ಚಪ್ಪಾಳೆ' ತಟ್ಟಿ ಗೌರವ

ಮಂಗಳೂರು, ಮಾ.22: ಕೊರೋನ ವೈರಸ್ ತಡೆಗಟ್ಟುವ ಸಲುವಾಗಿ ರಾತ್ರಿ ಹಗಲೆನ್ನದೆ ಸೇವೆಯಲ್ಲಿ ನಿರತರಾದ ಎಲ್ಲರಿಗೂ 'ಚಪ್ಪಾಳೆ' ತಟ್ಟಿ ಗೌರವ ಸಲ್ಲಿಸಲು ಪ್ರಧಾನಿ ಮೋದಿ ಕರೆ ನೀಡಿದಂತೆ ರವಿವಾರ ಸಂಜೆ 5 ಗಂಟೆಯ ವೇಳೆಗೆ ನಗರ ಮತ್ತು ಹೊರವಲಯದ ಬಹುತೇಕ ಮನೆಗಳಲ್ಲಿ, ಫ್ಲಾಟ್‌ಗಳ ಮಹಡಿಗಳಲ್ಲಿ, ಕಿಟಕಿ-ಬಾಗಿಲ ಬಳಿ ನಿಂತು ಚಪ್ಪಾಳೆ ತಟ್ಟಿದರು.
ಕೆಲವರು ಕೈ ಚಪ್ಪಾಳೆ ತಟ್ಟಿದರೆ, ಇನ್ನು ಕೆಲವರು ಪಾತ್ರೆಗಳಿಗೆ ಬಡಿದರು, ಗಂಟೆ-ತಮಟೆ ಬಾರಿಸಿದರು. ಸೈರನ್ ಮೊಳಗಿಸಿದರು. ಆ ಮೂಲಕ ಸೇವಾ ನಿರತ ವೈದ್ಯರು, ನರ್ಸ್‌ಗಳು, ಪ್ಯಾರಾ ಮೆಡಿಕಲ್ಸ್, ಪೌರ ಕಾರ್ಮಿಕರು, ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಗೌರವ ಸಲ್ಲಿಸಲಾಯಿತು.

















