ಇನ್ನು ಕೆಲ ವಾರ ಸಂಯಮ ಕಾಯ್ದುಕೊಳ್ಳಿ: ರಾಜ್ಯದ ಜನತೆಗೆ ಕುಮಾರಸ್ವಾಮಿ ಮನವಿ

ಬೆಂಗಳೂರು, ಮಾ. 22: ‘ಸ್ವಯಂ ನಿರ್ಬಂಧ ಹೇರಿಕೊಳ್ಳುವ ಮೂಲಕ ‘ಜನತಾ ಕರ್ಫ್ಯೂ’ಗೆ ಬೆಂಬಲಿಸಿದ ಸಮಸ್ತ ನಾಗರಿಕರಿಗೂ ಅಭಿನಂದನೆಗಳು. ಕೊರೋನಾ ಸೋಂಕು ತಗುಲದಂತೆ ಇನ್ನು ಕೆಲ ವಾರಗಳ ಕಾಲ ಸಂಯಮ ಕಾಯ್ದು ಕೊಳ್ಳುವ ಅಗತ್ಯವಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಸಲಹೆ ಮಾಡಿದ್ದಾರೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಮನುಕುಲದ ಮಹಾಮಾರಿ ಯಾಗಿರುವ ಕೊರೋನಾ ವೈರಸ್ ತಡೆಯಲು ಸಾಮಾಜಿಕ ಅಂತರ, ಶುಚಿತ್ವ ಇಂದಿನ ತುರ್ತು ಅಗತ್ಯ. ಈ ನಿಟ್ಟಿನಲ್ಲಿ ನಾವುಗಳು ಜಾಗೃತರಾಗಿದ್ದು, ಈ ಸೋಂಕನ್ನು ಎದುರಿಸಬೇಕಿದೆ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ತೋರುತ್ತಿರುವ ಅತೀವ ಜನಪರ ಕಾಳಜಿಗೆ ನನ್ನ ಪ್ರಣಾಮಗಳು’ ಎಂದು ತಿಳಿಸಿದ್ದಾರೆ.
Next Story





