ಮಂಗಳೂರು: ಚರ್ಚ್‌ಗಳಲ್ಲಿ ಗಂಟೆ ಬಾರಿಸುವ ಮೂಲಕ ಸೇವಾ ನಿರತರಿಗೆ ಕೃತಜ್ಞತೆ

ಮಂಗಳೂರು,ಮಾ.22:ಪ್ರಧಾನಿ ನರೇಂದ್ರ ಮೋದಿಯ ಕರೆಯ ಮೇರೆಗೆ ರವಿವಾರ ನಡೆದ ‘ಜನತಾ ಕರ್ಫ್ಯೂ’ಗೆ ಪೂರಕವಾಗಿ ಸಂಜೆ 5 ಗಂಟೆಗೆ ಕೊರೋನ ರೋಗಿಗಳ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಕೃತಜ್ಞತೆ ಅರ್ಪಿಸಲು ಕೈ ಚಪ್ಪಾಳೆಯ ಜತೆಗೆ ಮಂಗಳೂರು ಕೆಥೋಲಿಕ್ ಕ್ರೈಸ್ತ ಧರ್ಮಪ್ರಾಂತದ ಎಲ್ಲಾ ಚರ್ಚ್ ಮತ್ತು ಚಾಪೆಲ್‌ಗಳಲ್ಲಿ ಗಂಟೆ ಬಾರಿಸಲಾಯಿತು.
ಧರ್ಮಪ್ರಾಂತದ ಬಿಷಪ್ ರೈ.ರೆ.ಡಾ. ಪೀಟರ್ ಪಾವ್ಲ್ ಸಲ್ದಾನಾ ಅವರ ಸೂಚನೆಯ ಮೇರೆಗೆ ರವಿವಾರ ಚರ್ಚ್‌ಗಳಲ್ಲಿ ಬಲಿ ಪೂಜೆಗಳು ನಡೆಯಲಿಲ್ಲ. ಬದಲಾಗಿ ಕೊರೋನ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಂಡಿರುವ ವೈದ್ಯರು, ಶುಶ್ರೂಷಕಿಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ವೈಯಕ್ತಿಕವಾಗಿ ಕೈ ಚಪ್ಪಾಳೆಯ ಮೂಲಕ ಕೃತಜ್ಞತೆ ಸಲ್ಲಿಸಲಾಯಿತು.
ಈ ಸಂದರ್ಭ ವೈದ್ಯಕೀಯ ಸಿಬ್ಬಂದಿಯ ಸೇವೆಯಲ್ಲದೆ ವಿಮಾನ ಯಾನ ಹಾಗೂ ಸಾರಿಗೆ ಸಂಚಾರ ವ್ಯವಸ್ಥೆಯಲ್ಲೂ ಕೆಲಸ ಮಾಡುವ ಕೆಲಸಗಾರರ ಸೇವೆಯನ್ನೂ ಸ್ಮರಿಸಲಾಯಿತು.
Next Story





