ಕೆಎಸ್ಸಾರ್ಟಿಸಿಗೆ 28 ಕೋಟಿ ರೂ.ಗೂ ಅಧಿಕ ನಷ್ಟ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ. 22: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಗೆ ಮಾ.22 ಮತ್ತು ನಾಳೆ(ಮಾ.23)ಯೂ ಸೇರಿದಂತೆ ಈವರೆಗೂ ಕೊರೋನ ವೈರಸ್ ಸೋಂಕಿನ ಭೀತಿ ಕಾರಣಕ್ಕೆ ಸಂಚಾರ ಸ್ಥಗಿತದ ಹಿನ್ನಲೆಯಲ್ಲಿ ಒಟ್ಟಾರೆ 28 ಕೋಟಿ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ.
ನಾಳೆ (ಮಾ.23)ರಾಜ್ಯಾದ್ಯಂತ ಬಸ್ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಮಾ.24ರಂದು ಹವಾನಿಯಂತ್ರಿತ ಬಸ್ಗಳನ್ನು ಹೊರತುಪಡಿಸಿದರೆ ಉಳಿದ ಬಸ್ಗಳ ಸಂಚಾರ ಆರಂಭಿಸಲಾಗುವುದು. ತಮಿಳುನಾಡು, ಆಂಧ್ರ, ಕೇರಳ ಸಹಿತ ಹೊರ ರಾಜ್ಯಗಳ ಸಾರಿಗೆ ಸೇವೆಯನ್ನು ಮಾ.31ರ ವರೆಗೆ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
Next Story





