ಆಸ್ಪತ್ರೆಯಲ್ಲಿ ರೋಗಿಯೊಬ್ಬ ನರಳುತ್ತಿರುವ ವಿಡಿಯೋ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯದ್ದಲ್ಲ...
ಫ್ಯಾಕ್ಟ್ ಚೆಕ್

ಮಂಗಳೂರು: ಮಾಸ್ಕ್ ಧರಿಸಿದ ರೋಗಿಯೊಬ್ಬರು ಆಸ್ಪತ್ರೆಯಲ್ಲಿ ನರಳಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದು ವೆನ್ಲಾಕ್ ಆಸ್ಪತ್ರೆಯ ದೃಶ್ಯ ಎಂದು ಸಂದೇಶದಲ್ಲಿ ಬರೆಯಲಾಗಿದೆ. ಆದರೆ ಇದು ವೆನ್ ಲಾಕ್ ಆಸ್ಪತ್ರೆಯ ವಿಡಿಯೋ ಅಲ್ಲ ಎಂದು ಆಸ್ಪತ್ರೆಯ ಅಧೀಕ್ಷಕರು ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ಆಸ್ಪತ್ರೆಯಲ್ಲಿರುವ ವ್ಯಕ್ತಿಯೊಬ್ಬರಲ್ಲಿ ಕೊರೊನಾವೈರಸ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿಯವರು ಹೇಳಿಕೆ ನೀಡಿದ ನಂತರ ಕಿಡಿಗೇಡಿಗಳು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಆದರೆ ಈ ವಿಡಿಯೋ ಈ ಹಿಂದಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಇದು ಕೊರೊನಾ ರೋಗಿಯೇ ಎನ್ನುವುದೂ ಕೂಡ ಸ್ಪಷ್ಟವಾಗಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ವೆನ್ಲಾಕ್ ಆಸ್ಪತ್ರೆಯದ್ದು ಎಂದು ವಿಡಿಯೋ ಹರಡಿ ಅಪಪ್ರಚಾರ ಮಾಡುವುದರ ಬಗ್ಗೆ ವೆನ್ಲಾಕ್ ಅಧೀಕ್ಷಕರು ನಾಳೆ ಪೊಲೀಸ್ ದೂರು ನೀಡಲಿದ್ದಾರೆ.
Next Story





