ಒಂದೇ ದಿನ 81 ಪ್ರಕರಣಗಳು: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 396ಕ್ಕೇರಿಕೆ

ಹೊಸದಿಲ್ಲಿ: ರವಿವಾರ ದೇಶದಲ್ಲಿ 81 ಜನರಲ್ಲಿ ಕೊರೊನಾವೈರಸ್ ದೃಢಪಟ್ಟಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆ 396ಕ್ಕೇರಿದೆ.
ಕೊರೊನಾಸೋಂಕಿತರ ಸಂಖ್ಯೆ ಹೆಚ್ಚುತ್ತಿರುವಂತೆಯೇ ಸರಕಾರವು ಭದ್ರತಾ ಕ್ರಮಗಳಿಗೆ ಮುಂದಾಗಿದೆ. ಈಗಾಗಲೇ ಪ್ರಯಾಣಿಕ ರೈಲು ಸೇವೆಯನ್ನು, ಮೆಟ್ರೋ ಸೇವೆಯನ್ನು ನಿಲ್ಲಿಸಲಾಗಿದೆ. ಪಂಜಾಬ್ ಮತ್ತು ರಾಜಸ್ಥಾನದ ನಂತರ ದಿಲ್ಲಿ ಹಾಗು ಅರುಣಾಚಲ ಪ್ರದೇಶಗಳು ಸಂಪೂರ್ಣ ಬಂದ್ ಘೋಷಿಸಿವೆ.
Next Story





