Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕೊರೋನ ಹೋರಾಟ: ವೈದ್ಯರ ಬೇಡಿಕೆಗಳನ್ನು...

ಕೊರೋನ ಹೋರಾಟ: ವೈದ್ಯರ ಬೇಡಿಕೆಗಳನ್ನು ಕೇಂದ್ರ ಈಡೇರಿಸಲಿ

ವಾರ್ತಾಭಾರತಿವಾರ್ತಾಭಾರತಿ22 March 2020 11:56 PM IST
share
ಕೊರೋನ ಹೋರಾಟ: ವೈದ್ಯರ ಬೇಡಿಕೆಗಳನ್ನು ಕೇಂದ್ರ ಈಡೇರಿಸಲಿ

ಬಹುಶಃ ಭಾರತದ ಪಾಲಿಗೆ ರವಿವಾರ ಐತಿಹಾಸಿಕ ದಿನ. ಭಾಷೆ, ಧರ್ಮ, ಜಾತಿಯ ಹೆಸರಿನಲ್ಲಿ ಬಡಿದಾಡುವ ಜನರನ್ನು 'ಕೊರೋನ' ಒಂದು ಮಾಡಿತು. ಕೊರೋನ ಎನ್ನುವ ಸಮಾನ ಶತ್ರುವಿನ ವಿರುದ್ಧ ಇಡೀ ದೇಶ ಒಂದಾಗಿ ನಿಂತಿತು. 'ಜನತಾ ಕರ್ಫ್ಯೂ' ಮೂಲಕ ಈ ದೇಶದ ಪ್ರಜೆಗಳು ಸರ್ವರ ಹಿತಾಸಕ್ತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ವಯಂ ದಿಗ್ಬಂಧನ ಹೇರಿಕೊಂಡರು. ಯಾವುದೇ ರಾಜಕೀಯ ಪಕ್ಷಗಳು, ಧಾರ್ಮಿಕ ಸಂಘಟನೆಗಳ ಬೆಂಬಲವಿಲ್ಲದ ಈ ಬಂದ್‌ನ ಯಶಸ್ವಿ ಜನರಲ್ಲಿರುವ ಸಾಮಾಜಿಕ ಬದ್ಧತೆಯನ್ನು ಎತ್ತಿ ಹಿಡಿದಿದೆ. ಈ ಬಂದ್‌ನಿಂದ ಕೊರೋನದ ಮೇಲೆ ಪರಿಣಾಮವಾಗುತ್ತದೆಯೋ ಇಲ್ಲವೋ, ಆದರೆ ಒಂದು ವೈರಸ್ ವಿಶ್ವವನ್ನೇ ತಲ್ಲಣಗೊಳಿಸುತ್ತಿರುವ ಸಂದರ್ಭದಲ್ಲಿ ಅದರ ವಿರುದ್ಧ ಭಾರತ ಒಂದಾಗಿ ನಿಂತ ಪರಿ ಆಶಾದಾಯಕವಾದುದು. ಇಂತಹ ಮನಃಸ್ಥಿತಿ ಬರೇ ರೋಗದ ವಿರುದ್ಧ ಮಾತ್ರವಲ್ಲ, ದೇಶದ ಮುಂದಿರುವ ಇನ್ನಿತರ ಸವಾಲುಗಳ ಸಂದರ್ಭದಲ್ಲೂ ಬೆಳಕಿಗೆ ಬರಬೇಕಾಗಿದೆ.

ದೇಶವಾಸಿಗಳು ಪ್ರಧಾನಿಯ ಕರೆಯನ್ನು ಹೃತ್ಪೂರ್ವಕವಾಗಿ ಸ್ವೀಕರಿಸುವುದಕ್ಕೆ ಮುಖ್ಯ ಕಾರಣ, ರೋಗ ತನ್ನ ಮನೆ ಬಾಗಿಲವರೆಗೂ ಬರುವ ಅಪಾಯವಿದೆ ಎನ್ನುವ ಭಯದಿಂದ. ಇದೇ ಸಂದರ್ಭದಲ್ಲಿ ಈ ದೇಶದ ಆರ್ಥಿಕತೆಗೆ ಧಕ್ಕೆಯಾದರೆ, ಸಾಮಾಜಿಕ ಸೌಹಾರ್ದಕ್ಕೆ ಧಕ್ಕೆಯಾದರೂ ನಷ್ಟವುಂಟಾಗುವುದು ತನ್ನ ಮನೆಗೇ ಎನ್ನುವುದನ್ನು ಪ್ರತಿ ಭಾರತೀಯನೂ ಮನದಲ್ಲಿಟ್ಟುಕೊಳ್ಳಬೇಕಾಗಿದೆ. ಇಂದು ಕೊರೋನ ಈ ದೇಶಕ್ಕೆ ಲಕ್ಷ ಕೋಟಿಯಷ್ಟು ನಷ್ಟವುಂಟು ಮಾಡಿದೆ. ಇದೇ ಸಂದರ್ಭದಲ್ಲಿ ಕೋಮು ವೈರಸ್, ಜಾತಿ ವೈರಸ್‌ಗಳೂ ಈ ಹಿಂದೆ ದೇಶಕ್ಕೆ ಅಷ್ಟೇ ಅನಾಹುತಗಳನ್ನು ಮಾಡಿವೆ ಎನ್ನುವುದನ್ನು ನಾವು ಮರೆಯಬಾರದು. ಕೋಮುಗಲಭೆಗಳ ಬಗ್ಗೆ ನಾವು ಅನಾಸಕ್ತರಾಗುವುದು ಅಥವಾ ಅದರ ಕುರಿತಂತೆ ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವುದು 'ಅಲ್ಲಿನ ಸಾವು ನಮ್ಮ ಮನೆ ಬಾಗಿಲಿಗೆ ಬರಲಾರದು' ಎನ್ನುವ ಧೈರ್ಯದಿಂದ.

ಚೀನಾದಲ್ಲಿ ಕೊರೋನ ಕಂಡು ಬಂದಾಗ, ಈ ದೇಶದ ಒಂದು ಗುಂಪು ಅವರನ್ನು ನೋಡಿ ನಕ್ಕಿದ್ದರು. ಆದರೆ ನೆರೆಮನೆಗೆ ಬಿದ್ದ ಬೆಂಕಿಯ ಕಿಡಿ ಇಂದು ಎಲ್ಲರ ವಿಕೃತ ಸಂತೋಷ ವ್ಯಕ್ತಪಡಿಸಿತ್ತು. ಚೀನಾದ ಜನರ ಸ್ಥಿತಿಯನ್ನು ನೋಡಿ ನಕ್ಕ ನಾವೇ ಇಂದು, ಮನೆ ಬಾಗಿಲನ್ನು ಮುಚ್ಚಿ ಕೂರಬೇಕಾದ ಸ್ಥಿತಿ ಬಂದಿದೆ. ಕೊರೋನ ಈ ನಿಟ್ಟಿನಲ್ಲಿ ನಮಗೆ ಒಬ್ಬ ನಾಗರಿಕನಾಗಿ, ಮನುಷ್ಯನಾಗಿ ನಿಭಾಯಿಸಬೇಕಾದ ಹಲವು ಹೊಣೆಗಾರಿಕೆಗಳನ್ನು ಕಲಿಸಿದೆ. ಹತ್ತು ಹಲವು ವೈರಸ್‌ಗಳನ್ನು ಬೇರೆ ಬೇರೆ ಕಾರಣಗಳಿಂದ ನಮ್ಮಿಳಗೆ ಸಾಕುತ್ತಾ ಈ ದೇಶದ ನಾಶ ನಷ್ಟಕ್ಕೆ ಕಾರಣವಾಗಿರುವ ನಾವು ಆತ್ಮ ವಿಮರ್ಶೆ ನಡೆಸಲು ಒಂದು ಅವಕಾಶ ಒದಗಿಸಿ ಕೊಟ್ಟಿದೆ.

 'ಕೊರೋನ ವೈರಸ್ ವಿರುದ್ಧ ನಡೆಯುವ ಕಾರ್ಯಾಚರಣೆಯ ಭಾಗವಾಗಿ 'ಜನತಾ ಕರ್ಫ್ಯೂ'ವನ್ನು ಪಾಲಿಸಿ ಎಂಬ ನರೇಂದ್ರ ಮೋದಿಯ ಮಾತನ್ನು ಜನರು ಗಂಭೀರವಾಗಿ ಸ್ವೀಕರಿಸಿ ಅದನ್ನು ಯಶಸ್ವಿಗೊಳಿಸಿದ್ದಾರೆ. ಈಗ ಪ್ರಧಾನಿ ನರೇಂದ್ರ ಮೋದಿ ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸುವ ಸಂದರ್ಭ ಬಂದಿದೆ. ಈ ರೋಗಾಣುಗಳನ್ನು ಒಂದು ದಿನದ ಕರ್ಫ್ಯೂನಲ್ಲಿ ತಡೆಯುವುದು ಸಾಧ್ಯವಿಲ್ಲ ಎನ್ನುವುದು ಸ್ವತಃ ಪ್ರಧಾನಿಯವರಿಗೂ ಗೊತ್ತಿದೆ. ಹಾಗೆಯೇ ವರ್ಷವಿಡೀ ಮನೆ ಬಾಗಿಲು ಹಾಕಿ ಕೂರುವುದಕ್ಕೂ ಸಾಧ್ಯವಿಲ್ಲ. ಪ್ರಧಾನಿಯಾಗಿ ಮೋದಿಯವರ ಹೊಣೆಗಾರಿಕೆ ಬೇರೆಯೇ ತರದ್ದಿದೆ. ದೇಶಕ್ಕೆ ಯಾವುದೇ ವಿಪತ್ತು ಬಂದಾಗ ಪ್ರಧಾನಿ ನೇತೃತ್ವದಲ್ಲಿ ಸಭೆ ನಡೆದು, ಆ ವಿಪತ್ತನ್ನು ಎದುರಿಸಲು ಒಂದು ಯೋಜನೆಯನ್ನು ಅಥವಾ ಪ್ಯಾಕೇಜನ್ನು ಘೋಷಿಸಲಾಗುತ್ತದೆ. ಕೊರೋನ ಸೋಂಕು ಆರಂಭದ ಹಂತದಲ್ಲಿದ್ದರೆ ಗುಣಮುಖವಾಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇಂದು ವೈದ್ಯರು ಸೂಕ್ತ ಉಪಕರಣಗಳು, ಲ್ಯಾಬ್‌ಗಳು, ಪ್ರತ್ಯೇಕ ಕೊಠಡಿಗಳು ಇತ್ಯಾದಿಗಳಿಲ್ಲದೆ ಆತಂಕಿತರಾಗಿದ್ದಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಕೊರೋನ ಸೋಂಕಿತರಿಗಾಗಿ ಪ್ರತ್ಯೇಕ ವಾರ್ಡ್‌ಗಳನ್ನು ಮಾಡಲಾಗಿದೆಯಾದರೂ, ಅವರ ಮೂಲಕ ಅದು ಆಸ್ಪತ್ರೆಯ ಇನ್ನಿತರ ರೋಗಿಗಳಿಗೆ ಹರಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ವೈದ್ಯರಿಗೆ ಬೇಕಾಗಿರುವ ಸೌಕರ್ಯಗಳನ್ನು ತಕ್ಷಣವೇ ಒದಗಿಸಲು ಪ್ಯಾಕೇಜ್‌ಗಳನ್ನು ಬಿಡುಗಡೆ ಮಾಡಬೇಕು.

ಗಡಿಯಲ್ಲಿ ಯುದ್ಧ ನಡೆಯುತ್ತಿರುವಾಗ, ಸರಿಯಾದ ಆಹಾರ, ಯುದ್ದೋಪಕರಣಗಳನ್ನು ನೀಡದೆ, ಬರೇ ಚಪ್ಪಾಳೆಗಳ ಮೂಲಕ ಪ್ರೋತ್ಸಾಹಿಸಿದರೆ ಯೋಧ ಯುದ್ಧ ಗೆಲ್ಲಬಲ್ಲನೇ? ಈ ಕಾರಣಕ್ಕಾಗಿಯೇ ದೇಶಾದ್ಯಂತ ವೈದ್ಯರು ಬಹಿರಂಗವಾಗಿಯೇ 'ನಮಗೆ ಚಪ್ಪಾಳೆಗಳು ಬೇಕಾಗಿಲ್ಲ, ಅತ್ಯಾಧುನಿಕ ಉಪಕರಣಗಳು, ವೈದ್ಯಕೀಯ ಸವಲತ್ತುಗಳು ಬೇಕು' ಎಂದು ಪ್ರಧಾನಿಯವರನ್ನು ಆಗ್ರಹಿಸುತ್ತಿದ್ದಾರೆ. ಆದರೆ ಮೋದಿ ಈ ಬಗ್ಗೆ ತಮ್ಮ ವೌನವನ್ನು ಮುರಿದಿಲ್ಲ. ದಿಲ್ಲಿ, ಕೇರಳದಂತಹ ಸರಕಾರಗಳು ಭಾರೀ ಪ್ಯಾಕೇಜ್‌ಗಳನ್ನು ಘೋಷಿಸಿವೆ ಮಾತ್ರವಲ್ಲ, ಉದ್ಯೋಗವಿಲ್ಲದೆ ಬೀದಿಗೆ ಬಿದ್ದಿರುವ, ಅಘೋಷಿತ ಕರ್ಫ್ಯೂನಿಂದ ಅನ್ನಾಹಾರ ದೊರಕದೆ ಕಂಗಾಲಾಗಿರುವ ಲಕ್ಷಾಂತರ ಜನರಿಗೆ ನೆರವಾಗಲು ಮುಂದಾಗಿವೆ. ಇಂದು 341ರಷ್ಟು ಜನರು ಕೊರೋನ ವೈರಸ್ ಸೋಂಕಿತರಾಗಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಕೊರೋನಾ ಜಾಗೃತಿಯ ಭಾಗವಾಗಿ ಅನುಸರಿಸಿದ ಕಠಿಣ ಕ್ರಮಗಳಿಂದಾಗಿ ಈ ದೇಶದ ಬಡ ಜನರು ಬೇರೆ ಬೇರೆ ವಿನಾಶಕಾರಿ ರೋಗಗಳಿಗೆ ಬಲಿಯಾಗಿದ್ದಾರೆ. ಅವುಗಳಲ್ಲಿ ಮುಖ್ಯವಾದ ರೋಗವೇ ಹಸಿವು.

ಈ ದೇಶದಲ್ಲಿ ಹಸಿವು ಕೂಡ ಒಂದು ರೋಗ. ಈಗಾಗಲೇ ಶೇ. 45ಕ್ಕಿಂತಲೂ ಅಧಿಕ ಮಂದಿ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಜನರ ಹಸಿವಿನ ಬಗ್ಗೆ ನಿರ್ಲಕ್ಷ ವಹಿಸಿದರೆ ಈ ಅಘೋಷಿತ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಹಸಿವಿನಿಂದ ಸತ್ತವರ ಸಂಖ್ಯೆ ಕೊರೋನಕ್ಕೆ ಬಲಿಯಾದವರ ಸಂಖ್ಯೆಗಳಿಗಿಂತಲೂ ಹೆಚ್ಚಲಿವೆ ದಿನಗೂಲಿ ಕಾರ್ಮಿಕರೂ ಸೇರಿದಂತೆ ಜನಸಾಮಾನ್ಯರಿಗೆ, ರೋಗಬಾಧಿತರಿಗೆ ಕೇಂದ್ರ ಸರಕಾರ ಯಾವುದೇ ಸೌಲಭ್ಯಗಳನ್ನು ಘೋಷಿಸಿಲ್ಲ. ಆಯಾ ರಾಜ್ಯ ಸರಕಾರಗಳೇ ತೇಪೆ ಹಚ್ಚುವ ಪ್ರಯತ್ನ ಮಾಡುತ್ತಿವೆ. ಒಂದೆಡೆ ರೋಗಗಳ ವಿರುದ್ಧ ಹೋರಾಡುವುದಕ್ಕೆ ಬೇಕಾದ ಸೌಲಭ್ಯಗಳನ್ನು ನೀಡುತ್ತಲೇ, ಮಗದೊಂದೆಡೆ ಬಂದ್‌ಗಳಿಂದ ಜರ್ಜರಿತವಾಗಿರುವ ಬದುಕನ್ನು ಮೇಲೆತ್ತುವ ನಿಟ್ಟಿನಲ್ಲಿ ಸರಕಾರ ಯೋಜನೆಗಳನ್ನು ರೂಪಿಸಬೇಕಾಗಿದೆ.

ತನ್ನ ಕೈಯಲ್ಲಿ ದುಡ್ಡಿಲ್ಲ ಎಂದು ಹೇಳಲು ಮೋದಿ ಸರಕಾರ ಮುಜುಗರ ಪಟ್ಟುಕೊಳ್ಳುವಂತಿದೆ. ರಾಮಮಂದಿರ, ಶಿವಾಜಿ ಪಾರ್ಕ್, ಆ ಪ್ರತಿಮೆ, ಈ ಸಮ್ಮೇಳನ ಇತ್ಯಾದಿ ಇತ್ಯಾದಿಗಳಿಗಾಗಿ ಮೀಸಲಿಟ್ಟ ಅನವಶ್ಯಕ ವೆಚ್ಚಗಳನ್ನೆಲ್ಲ ತುರ್ತಾಗಿ ಕಡಿತಗೊಳಿಸಿ ಅಥವಾ ಅವುಗಳನ್ನು ಸ್ಥಗಿತಗೊಳಿಸಿ ಆ ಹಣವನ್ನು ಕೊರೋನ ದುಷ್ಪರಿಣಾಮಗಳನ್ನು ಎದುರಿಸಲು ಬಳಸಬೇಕಾಗಿದೆ. ತಡ ಮಾಡದೇ ಪ್ರಧಾನಿ ಈ ನಿಟ್ಟಿನಲ್ಲಿ ದೃಢ ಹೆಜ್ಜೆಯನ್ನಿಡುವುದನ್ನು ಜನರು ಕಾಯುತ್ತಿದ್ದಾರೆ. ಪ್ರಧಾನಿಯವರು ಜನಸಾಮಾನ್ಯರ ನಂಬಿಕೆಯನ್ನು ಹುಸಿಗೊಳಿಸಬಾರದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X