ಶಾಸಕ ಕಾಮತ್‌ರಿಂದ ಸಹಾಯವಾಣಿ
ಮಂಗಳೂರು, ಮಾ.23: ನಗರದಲ್ಲಿ ಎಲ್ಲಾದರು ಕೊರೋನ ಶಂಕಿತರು ಅದರಲ್ಲೂ ಜಿಲ್ಲಾಡಳಿತದಿಂದ ಸ್ಟ್ಯಾಂಪಿಂಗ್ ಹಾಕಿಸಿಕೊಂಡಿದ್ದರೂ ಕೂಡ ಸಾರ್ವಜನಿಕವಾಗಿ ತಿರುಗಾಡುತ್ತಿದ್ದರೆ, ವಿದೇಶಿ ನಾಗರಿಕರು ಕಂಡುಬಂದಲ್ಲಿ ಪರವೂರಿನಿಂದ ಮಂಗಳೂರಿಗೆ ಬಂದು ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ವಿವಿಧೆಡೆ ಯಾರಾದರೂ ಅನುಮಾನಾಸ್ಪದವಾಗಿ ತಿರುಗುತ್ತಿದ್ದರೆ, ಅಂತಹವರ ನೆರವಿಗಾಗಿ ಸಹಾಯವಾಣಿ (ಮೊ.ಸಂ: 8197270222)ಯನ್ನು ಶಾಸಕ ವೇದವ್ಯಾಸ ಕಾಮತ್ ತೆರೆದಿದ್ದಾರೆ.
ಮಂಗಳೂರು ನಗರ ದಕ್ಷಿಣ ವಿಧಾನಸಭಾ ವ್ಯಾಪ್ತಿಯಲ್ಲಿ ಎಲ್ಲಾದರೂ ಸಾರ್ವಜನಿಕರಿಗೆ ಸಮಸ್ಯೆಯಾದಲ್ಲಿ ಅಥವಾ ಸೆಕ್ಷನ್ ಇರುವ ಕಾರಣ ವಿದೇಶದಿಂದ ಬಂದು ಸಮಸ್ಯೆ ಎದುರಿಸುತ್ತಿದ್ದಲ್ಲಿ ಮತ್ತು ಜಿಲ್ಲಾಡಳಿತ ನೀಡಿರುವ ಆದೇಶಗಳನ್ನು ಯಾರಾದರು ಉಲ್ಲಂಘಿಸುವುದು ಕಂಡು ಬಂದರೆ ಅಥವಾ ಆರೋಗ್ಯಕ್ಕೆ ಸಂಬಂಧಿಸಿ ಯಾವುದಾದರೂ ಸಮಸ್ಯೆಗೆ ಸಿಲುಕಿದ್ದರೆ ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





