ಕೊರೋನ ವೈರಸ್ ಹಿನ್ನೆಲೆ: ಮೊಬೈಲ್ ಸಂಖ್ಯೆ ಬಳಸಿ ಪಡಿತರ ಪಡೆಯಲು ವ್ಯವಸ್ಥೆ
ದ.ಕ. ಜಿಲ್ಲಾಧಿಕಾರಿ ಕಚೇರಿ ಪ್ರಕಟನೆ

ಸಾಂದರ್ಭಿಕ ಚಿತ್ರ
ಮಂಗಳೂರು, ಮಾ.23: ಕೊರೋನ ಸೋಂಕು ಹರಡದಂತೆ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಸ್ತುತ ಬೆರಳಚ್ಚು ಬಯೋಮೆಟ್ರಿಕ್ ನೀಡಿ ಪಡಿತರ ಬದಲು ಪರ್ಯಾಯವಾಗಿ ಆಧಾರ್ ನೋಂದಾಯಿತ ಮೊಬೈಲ್ ಬಳಸಿ ಒಟಿಪಿ ಮೂಲಕ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಸಾಕಷ್ಟು ಸಂಖ್ಯೆಯಲ್ಲಿ ಪಡಿತರ ಚೀಟಿದಾರರು ಆಧಾರ್ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯಿಲ್ಲದಿರುವುದು ಕಂಡು ಬಂದಿರುವುದರಿಂದ ಆಧಾರ್ ನೋಂದಣಿ ಆಗದ ಮೊಬೈಲ್ ಸಂಖ್ಯೆ ಬಳಸಿ ಒಟಿಪಿ ಮೂಲಕ ಪಡಿತರ ಪಡೆಯುವ ವ್ಯವಸ್ಥೆಯನ್ನು ಈಗ ಕಲ್ಪಿಸಲಾಗಿದೆ.
ಈ ಪ್ರಯೋಜನವನ್ನು ಪಡಿತರ ಚೀಟಿದಾರರು ಪಡೆದುಕೊಳ್ಳಲು ದ.ಕ. ಜಿಲ್ಲಾಧಿಕಾರಿ ಕಚೇರಿಯ ಪ್ರಕಟನೆ ತಿಳಿಸಿದೆ.
Next Story





