ಕೊರೋನ ವೈರಸ್: ಕಾರ್ಮಿಕರ ರಕ್ಷಣೆ ಸರಕಾರಗಳ ಹೊಣೆ- ಎಐಟಿಯುಸಿ
ಮಂಗಳೂರು, ಮಾ. 23: ಕೊರೋನ ವೈರಸ್‌ನ ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ತೆಗೆದುಕೊಂಡಿರುವ ಕ್ರಮಗಳನ್ನು ಎಐಟಿಯುಸಿ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿ ಸ್ವಾಗತಿಸಿದೆ. ಆದರೆ ಸರಕಾರಗಳು ತೆಗೆದುಕೊಂಡ ಕೆಲವು ಕ್ರಮಗಳಿಂದಾಗಿ ಜನ ಸಾಮಾನ್ಯರು ಅದರಲ್ಲೂ ಮುಖ್ಯವಾಗಿ ಕಾರ್ಮಿಕರು ಬಹಳಷ್ಟು ಸಮಸ್ಯೆಗೊಳಗಾಗುತ್ತಿದ್ದಾರೆ.
ಕೃಷಿ ಹಾಗೂ ಅಸಂಘಟಿತ ಕಾರ್ಮಿಕರು ದಿನ ನಿತ್ಯದ ಕೂಳಿಗಾಗಿ ಪರದಾಡುವಂತಹ ಸ್ಥಿತಿ ಬಂದೊದಗಿದೆ. ನಿತ್ಯ ದಿನಗೂಲಿ ಪಡೆದು ಜೀವನ ನಿರ್ವಹಿಸುತ್ತಿದ್ದವರು ಕೆಲಸವಿಲ್ಲದೆ ಬಹಳ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಜನರ ಈ ಪರಿಸ್ಥಿತಿಗಳನ್ನು ಮನಗಂಡ ಕೇರಳ ಸರಕಾರ 20,000 ಕೋ.ರೂ.ವನ್ನು ಬಳಸುತ್ತಿವೆ. ಹಾಗಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಇಂತಹ ಯೋಜನೆಗಳನ್ನು ಕೂಡಲೇ ಜಾರಿಗೆ ತಂದು ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಬೇಕು. ಕಾರ್ಮಿಕ ವರ್ಗದ ರಕ್ಷಣೆಯು ಸರಕಾರಗಳ ಹೊಣೆಯಾಗಿದೆ ಎಂದು ಅಧ್ಯಕ್ಷ ಕೆವಿ ಭಟ್ ಮತ್ತು ಕಾರ್ಯದರ್ಶಿ ಎಚ್‌ವಿ ರಾವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





