ತೆಲಂಗಾಣ: ಮೂರು ಹೊಸ ಕೊರೋನ ಪ್ರಕರಣಗಳು ಪತ್ತೆ

ಹೈದರಾಬಾದ್,ಮಾ.23: ತೆಲಂಗಾಣದಲ್ಲಿ ಹೊಸದಾಗಿ ಮೂರು ಕೊರೋನವೈರಸ್ ಪ್ರಕರಣಗಳು ವರದಿಯಾಗಿದ್ದು,ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 30ಕ್ಕೇರಿದೆ ಎಂದು ಸರಕಾರವು ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
ಹೊಸದಾಗಿ ವರದಿಯಾಗಿರುವ ಪ್ರಕರಣಗಳ ಪೈಕಿ ಓರ್ವ ವ್ಯಕ್ತಿ ಇತ್ತೀಚಿಗೆ ಫ್ರಾನ್ಸ್‌ಗೆ ಮತ್ತು ಇನ್ನೋರ್ವ ವ್ಯಕ್ತಿ ಲಂಡನ್‌ಗೆ ಭೇಟಿ ನೀಡಿದ್ದರು. ಮೂರನೇ ವ್ಯಕ್ತಿ ಕರೀಂನಗರ ನಿವಾಸಿಯಾಗಿದ್ದು, ಕರೋನವೈರಸ್ ಸೋಂಕುಪೀಡಿತ 10 ಸದಸ್ಯರ ಇಂಡೋನೇಷ್ಯಾದ ಗುಂಪೊಂದರ ಸಂಪರ್ಕಕ್ಕೆ ಬಂದಿದ್ದ. ಈ ಗುಂಪು ದಿಲ್ಲಿಯಿಂದ ರೈಲಿನಲ್ಲಿ ಕರೀಂನಗರಕ್ಕೆ ಆಗಮಿಸಿತ್ತು ಮತ್ತು ಅಲ್ಲಿ ಎರಡು ದಿನಗಳ ಕಾಲ ಉಳಿದುಕೊಂಡಿತ್ತು.
ರಾಜ್ಯದಲ್ಲಿ ಸೋಮವಾರ ಲಾಕ್‌ಡೌನ್ ಆರಂಭಗೊಂಡಿದ್ದು, ಮಾ.31ರವರೆಗೆ ಮುಂದುವರಿಯಲಿದೆ.
Next Story





