ಬೈಕಂಪಾಡಿ ಜಮಾಅತ್ ಗೆ ಒಳಪಟ್ಟ 3 ಮಸೀದಿಗಳಿಗೆ ತಾತ್ಕಾಲಿಕ ಪ್ರವೇಶ ನಿರ್ಬಂಧ: ಅಬ್ದುಲ್ ನಾಸಿರ್ ಲಕ್ಕಿಸ್ಟಾರ್

ಮಂಗಳೂರು : ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಮಾ.23ರ ಇಶಾ ನಮಾಝ್ ಬಳಿಕ ಬೈಕಂಪಾಡಿ ಜಮಾಅತ್ ಗೆ ಒಳಪಡುವ 3 ಮಸೀದಿಗಳಿಗೆ ಜಿಲ್ಲಾಡಳಿತ ಹಾಗೂ ಧಾರ್ಮಿಕ ಮುಖಂಡರ ಆದೇಶದಂತೆ ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ. ದಿನದ ಇಮಾಮ್ ಜಮಾಅತ್ ಅಥವಾ ಶುಕ್ರವಾರದ ಜುಮಾ ನಮಾಝ್ ಇರುವುದಿಲ್ಲ ಎಂದು ಬೈಕಂಪಾಡಿ ಜುಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷರಾದ ಬಿ.ಎ.ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದ.ಕ. ಜಿಲ್ಲಾಡಳಿತದ ತೀರ್ಮಾನವನ್ನು ಎಲ್ಲರೂ ಗೌರವಿಸಬೇಕು ಹಾಗೂ ಬೈಕಂಪಾಡಿ ನಾಗರಿಕರ ಯಾವುದೇ ಕಷ್ಟ ಅಥವಾ ತೊಂದರೆಗಳಿದ್ದಲ್ಲಿ ಯಾವುದೇ ಸಂದರ್ಭದಲ್ಲಿ ನನ್ನನ್ನು ಅಥವಾ ಜಮಾಅತ್ ಆಡಳಿತ ಕಮಿಟಿಯ ಸದಸ್ಯರನ್ನು ಸಂಪರ್ಕಿಸಬಹುದು. ಬೈಕಂಪಾಡಿ ಜಮಾಅತ್ ಮೊಹಲ್ಲಾಗಳಲ್ಲಿ ವಾಸಿಸುತ್ತಿರುವ ಸರ್ವ ಧರ್ಮದ ನಾಗರಿಕರಿಗೆ ನಿತ್ಯದ ಊಟ ಅಥವ ಆಹಾರ ಸಾಮಗ್ರಿ, ಔಷಧಿಗಳ ತೊಂದರೆ/ ಅವಶ್ಯವಿದ್ದಲ್ಲಿ ಹಾಗೂ ಯಾರಾದರು ಹಸಿವಿನಿಂದ ಇರುವ ಬಗ್ಗೆ ನಮ್ಮ ಗಮನಕ್ಕೆ ತಂದಲ್ಲಿ ವಿಶೇಷ ವ್ಯವಸ್ಥೆಯನ್ನು ಕಲ್ಪಿಸುವ ಯೋಜನೆಯನ್ನು ಮಾಡಿರುತ್ತೇವೆ ಎಂದು ಅಬ್ದುಲ್ ನಾಸಿರ್ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.





