ಸರಕಾರ ಜನರನ್ನು ಗೊಂದಲಕ್ಕೀಡು ಮಾಡಬಾರದು: ಯು.ಟಿ.ಖಾದರ್
ಮಂಗಳೂರು, ಮಾ.26: ಕೊರೋನ ನಿಯಂತ್ರಣಕ್ಕೆ ಸಂಬಂಧಿಸಿ ರಾಜ್ಯ ಸರಕಾರವು ತೆಗೆದುಕೊಳ್ಳುವ ನಿರ್ಧಾರವು ಜನರನ್ನು ಗೊಂದಲಕ್ಕೀಡು ಮಾಡುವಂತಿರಬಾರದು ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ದ.ಕ.ಜಿಲ್ಲಾಧಿಕಾರಿಯನ್ನು ಗುರುವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಸರಕಾರವು ಸೂಪರ್ ಮಾರ್ಕೆಟ್‌ಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಆದರೆ ಜನಸಾಮಾನ್ಯರು ಕೆಲಸವಿಲ್ಲದೆ ತೊಂದರೆಗೀಡಾಗಿದ್ದಾರೆ. ಸೂಪರ್ ಮಾಕೆರ್ಟ್‌ಗಳನ್ನು ತೆರೆದಿಟ್ಟರೆ ಅಲ್ಲಿ ಸೋಶಿಯಲ್ ಡಿಸ್ಟೆನ್ಸ್ ಸಾಧ್ಯವಿಲ್ಲ. ಹಾಗಾಗಿ ಈ ಬಗ್ಗೆ ಸರಕಾರ ಪುನಃ ಪರಿಶೀಲಿಸಬೇಕಿದೆ ಎಂದು ಖಾದರ್ ಹೇಳಿದರು.
ನಗರ ಮಟ್ಟದಲ್ಲಿ ಕಾಣಿಸಿಕೊಂಡ ಕೊರೋನ ಎಲ್ಲಾ ಕಡೆ ವ್ಯಾಪಿಸಿದೆ. ಹಳ್ಳಿ, ಗ್ರಾಮೀಣ ಭಾಗದ ಜನರು ಕಷ್ಟವಾದರೂ ಲಾಕ್‌ಡೌನ್‌ಗೆ ಸ್ಪಂದಿಸುತ್ತಿದ್ದಾರೆ. ಸೂಪರ್ ಮಾರ್ಕೆಟ್‌ಗಳನ್ನು ತೆರೆಯಬಹುದಾದರೆ ಕೂಲಿ ಕಾರ್ಮಿಕರು ಯಾಕೆ ಮನೆಯಲ್ಲಿರಬೇಕು ? ಕೂಲಿ ಕಾರ್ಮಿಕರು ದುಡಿಯಲು ಅವಕಾಶ ಕೊಡಿ ಎಂದು ಖಾದರ್ ಮನವಿ ಮಾಡಿದರು.
Next Story





