ಭಟ್ಕಳ: ಕರ್ತವ್ಯದ ನಡುವೆ ಮಾನವೀಯತೆ ಮೆರೆದ ಪೊಲೀಸರು

ಭಟ್ಕಳ: ಲಾಕ್ ಡೌನ್ ಸಮಯದಲ್ಲಿ ಎಲ್ಲಿಯೂ ಹೊಟೇಲ್‍ಗಳಾಗಿ ಕುಡಿಯಲು ನೀರು ಸಹ ಸಿಗದ ಪರಿಸ್ಥಿತಿ ನಿರ್ಮಾಣಗೊಂಡಿದ್ದು ರಸ್ತೆ ಬದಿ ಭಿಕ್ಷೆ ಬೇಡಿ, ಹೋಟೆಲ್ ನಲ್ಲಿ ಉಂಡು ದೇವಸ್ಥಾನ, ಮಸೀದಿ ಬಸ್ ನಿಲ್ದಾಣದ ಎದರು ರಾತ್ರಿ ಕಳೆಯುವ ನಿರ್ಗತಿಕರ ಸ್ಥಿತಿ ಚಿಂತಾಜನಕವಾಗುತ್ತಿದ್ದು ಭಟ್ಕಳದಲ್ಲಿ ಕರ್ತವ್ಯ ನಿರತ ಪೊಲೀಸರು ತಮ್ಮ ಕರ್ತವ್ಯದ ನಡುವೆಯೂ ಮಾನವೀಯತೆಯನ್ನು ಮರೆದು ರಸ್ತೆ ಬದಿ ಭಿಕ್ಷೆ ಬೇಡಿ ಬದುಕುತ್ತಿರುವವರಿಗೆ ಆಸರೆಯಾಗಿ ತಮ್ಮ ಪಾಲಿನ ಅನ್ನ, ನೀರಿನಲ್ಲಿ ಅವರಿಗೊಂದಿಷ್ಟು ಪಾಲು ನೀಡಿ ಅವರ ಬದುಕಿಗೆ ಆಸರೆಯಾಗಿದ್ದಾರೆ.
ಯಾವಾಗಲೂ ಪೊಲೀಸರೆಂದರೆ ಸಿಡುಕು ಸ್ವಭಾವದವರು, ಅವರಲ್ಲಿ ಮಾವನೀಯತೆ ಎಂಬುದಿಲ್ಲ ಎನ್ನುವ ಮಂದಿಗೆ ಪೊಲೀಸರು ಕೂಡ ಮನುಷ್ಯರು, ನಮ್ಮಲ್ಲಿಯೂ ಕೂಡ ಮಾನವೀಯತೆ ಹೃದಯವಿದೆ ಎಂದು ತೋರಿಸಿಕೊಟ್ಟಿರುವ ಇಲ್ಲಿನ ಪೂಲೀಸರು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
Next Story






.jpg)
.jpg)

