Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ರಾಜ್ಯ ಸರಕಾರ ಆದೇಶಿಸಿದ್ದು 100...

ರಾಜ್ಯ ಸರಕಾರ ಆದೇಶಿಸಿದ್ದು 100 ವೆಂಟಿಲೇಟರ್ ಗಳಿಗೆ ಹೊರತು ಸಾವಿರ ವೆಂಟಿಲೇಟರ್ ಗಳಿಗಲ್ಲ !

ಇನ್ನೂ ದೃಢೀಕೃತ ಆದೇಶ ಬಂದಿಲ್ಲ ಎಂದ ಕಂಪೆನಿ

ವಾರ್ತಾಭಾರತಿವಾರ್ತಾಭಾರತಿ27 March 2020 5:32 PM IST
share
ರಾಜ್ಯ ಸರಕಾರ ಆದೇಶಿಸಿದ್ದು 100 ವೆಂಟಿಲೇಟರ್ ಗಳಿಗೆ ಹೊರತು ಸಾವಿರ ವೆಂಟಿಲೇಟರ್ ಗಳಿಗಲ್ಲ !

ಬೆಂಗಳೂರು, ಮಾ.27: ಕೊರೋನ ಸೋಂಕು ನಿಯಂತ್ರಣಕ್ಕಾಗಿ ಒಂದು ಸಾವಿರ ವೆಂಟಿಲೇಟರ್ ನೀಡಬೇಕು ಎಂದು ರಾಜ್ಯ ಸರಕಾರವು ಮೈಸೂರಿನ ಸ್ಕ್ಯಾನ್‍ರೇ ಟೆಕ್ನಾಲಜಿ ಕಂಪೆನಿಗೆ ಆದೇಶಿಸಿದೆ ಎಂದು ಹೇಳಿದ್ದ ರಾಜ್ಯ ಸರಕಾರ, ಈವರೆಗೆ ಕೇವಲ 100 ವೆಂಟಿಲೇಟರ್ ಗಳಿಗೆ ಅಷ್ಟೇ ಆದೇಶ ನೀಡಿರುವುದು ತಿಳಿದುಬಂದಿದೆ. ಅದೂ ದೃಢೀಕೃತ ಆದೇಶವಲ್ಲ ಎಂದು ಕಂಪೆನಿ ಹೇಳಿದೆ.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸರಕಾರದ ಅಧಿಕಾರಿಗಳು ಮಾ.23 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ಕೂಡಲೇ ಒಂದು ಸಾವಿರ ವೆಂಟಿಲೇಟರ್ ಗಳನ್ನು ನೀಡುವಂತೆ ತಿಳಿಸಿತ್ತಾದರೂ, 100 ವೆಂಟಿಲೇಟರ್ ಪೂರೈಸುವಂತೆ ನಮಗೆ ಆದೇಶ ತಲುಪಿದೆ ಎಂದು ಕಂಪೆನಿಯ ಸಂಸ್ಥಾಪಕ ಹಾಗೂ ಆಡಳಿತ ನಿರ್ದೇಶಕ ವಿಶ್ವಪ್ರಸಾದ್ ಆಳ್ವ ಹೇಳಿದ್ದಾರೆ.

ಡಿಸಿಎಂ ಹಾಗೂ ಆರೋಗ್ಯ ಸಚಿವ ಸೂಚನೆ ನೀಡಿದ್ದಾರೆ. ಅದು ಕೇವಲ ಪತ್ರಗಳ ಮೂಲಕ ಹೇಳಿದ್ದು, ಯಾವುದೇ ಮುಂಗಡ ಹಣವನ್ನೂ ನೀಡಿಲ್ಲ. ಹೀಗಾಗಿ, ಈಗ ಬಂದಿರುವ ಆದೇಶವನ್ನು ದೃಢೀಕೃತ ಆದೇಶ ಎಂದು ಪರಿಗಣಿಸಲು ಆಗುವುದಿಲ್ಲ. ನಾವು ರಾಜ್ಯ ಸರಕಾರಕ್ಕೆ ವೆಂಟಿಲೇಟರ್ ತಯಾರಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿಗೆ ಮುಗಿದ ಉಭಯ ಸದನಗಳಲ್ಲಿ ಸಚಿವರು ವೆಂಟಿಲೇಟರ್ ಪೂರೈಸುವಂತೆ ಸ್ಕ್ಯಾನ್‍ರೇ ಕಂಪೆನಿಗೆ ಆದೇಶ ನೀಡಲಾಗಿದೆ ಎಂದು ಅಶ್ವಥ್ ನಾರಾಯಣ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದರು. ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ಹಾಗೂ ಹೊರರಾಜ್ಯಗಳಿಂದ 30 ಸಾವಿರಕ್ಕೂ ಅಧಿಕ ವೆಂಟಿಲೇಟರ್ ಗಳಿಗೆ ಬೇಡಿಕೆ ಬಂದಿತ್ತು. ಆದರೆ, ಯಾವುದೇ ವಸ್ತುಗಳ ರಫ್ತು ಮಾಡುವುದನ್ನು ಕೇಂದ್ರ ಸರಕಾರ ನಿರ್ಬಂಧಿಸಿದೆ. ಹೀಗಾಗಿ, ಎಲ್ಲವೂ ಸ್ತಬ್ಧಗೊಂಡಿವೆ ಎಂದರು.

ಮೈಸೂರು ಮತ್ತು ಇಟಲಿಯ ಬೊಲಾಗ್ನಾದಲ್ಲಿರುವ ಕಂಪೆನಿಯ ಘಟಕಗಳು ದೇಶ ಮತ್ತು ವಿದೇಶಗಳಿಂದ ಬಂದಿರುವ ವೆಂಟಿಲೇಟರ್ ಗಳ ತುರ್ತು ಬೇಡಿಕೆ ಪೂರೈಸಲು ದಿನದ 24 ಗಂಟೆಗೂ ಕಾರ್ಯನಿರ್ವಹಿಸುತ್ತಿದ್ದು, ಸಾಮರ್ಥ್ಯಕ್ಕಿಂತ 25 ಪಟ್ಟು ಹೆಚ್ಚು ಕೆಲಸ ಮಾಡುತ್ತಿದೆ.

ಸದ್ಯ ಇಡೀ ದೇಶದಲ್ಲಿ ಒಂದು ಲಕ್ಷ ವೆಂಟಿಲೇಟರ್ ಲಭ್ಯವಿದ್ದು, ಇನ್ನೂ ಒಂದು ಲಕ್ಷ ವೆಂಟಿಲೇಟರ್ ಗೆ ಕೇಂದ್ರದಿಂದ ಬೇಡಿಕೆ ಬಂದಿದೆ. ಸಹಭಾಗಿ ಕಂಪೆನಿಗಳ ನೆರವಿನಿಂದ ಈ ಗುರಿ ಈಡೇರಿಸುವ ವಿಶ್ವಾಸವಿದೆ. ಕೋವಿಡ್ 19 ನಿಯಂತ್ರಣ ಕಾರ್ಯಪಡೆಯಲ್ಲಿರುವ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವಗುಪ್ತಾ ವಿವಿಧ ಹೊಣೆಗಾರಿಕೆ ವಹಿಸಿರುವ ಐಎಎಸ್ ಅಧಿಕಾರಿಗಳಾದ ಗುಂಜನ್ ಕೃಷ್ಣ, ಮಣಿವಣ್ಣನ್ ನಿರಂತರ ಸಂಪರ್ಕದಲ್ಲಿದ್ದಾರೆ. ಮೈಸೂರಿನ ಘಟಕದಲ್ಲಿ ಮೊದಲ ಹಂತದಲ್ಲಿ ವೆಂಟಿಲೇಟರ್ ಗಳು 10 ದಿನಗಳ ಒಳಗೆ ಸಿದ್ಧವಾಗಲಿದೆ. ಕೆಲವೇ ವಾರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ವೆಂಟಿಲೇಟರ್ ಉತ್ಪಾದನೆ ಆರಂಭವಾಗಲಿದೆ ವಿಶ್ವಪ್ರಸಾದ್ ಆಳ್ವ ಎಂದರು.

ವೆಂಟಿಲೇಟರ್ ಗೆ 5 ಲಕ್ಷದಿಂದ 12 ಲಕ್ಷದವರೆಗೆ ಬೆಲೆ ಇದೆ. ಆದರೆ, ಉತ್ಪಾದನಾ ಪ್ರಮಾಣ ಅಧಿಕವಾಗುತ್ತಿದ್ದಂತೆಯೇ ಬೆಲೆಯೂ ಕಡಿಮೆಯಾಗುತ್ತದೆ. 50 ಸಾವಿರ ವೆಂಟಿಲೇಟರ್ ಒಂದೇ ಸಲ ಉತ್ಪಾದನೆಯಾದರೆ ಬೆಲೆ ಕನಿಷ್ಠ ಮಟ್ಟಕ್ಕಿಳಿಯುತ್ತದೆ. ಸದ್ಯ ನಮ್ಮಲ್ಲಿ ಸ್ವಯಂಚಾಲಿತ ವೆಂಟಿಲೇಟರ್ ಉತ್ಪಾದಿಸುತ್ತಿದ್ದೇವೆ. ಸೆಮಿ ವೆಂಟಿಲೇಟರ್ ಬೆಲೆ ಇನ್ನೂ ಕಡಿಮೆಯಾಗುತ್ತದೆ ಎಂದು ವಿಶ್ವಪ್ರಸಾದ್ ಆಳ್ವ ಅಭಿಪ್ರಾಯಪಟ್ಟಿದ್ದಾರೆ.

ಸ್ಕ್ಯಾನ್‍ರೇ ಕಂಪೆನಿಗೆ ತಿಂಗಳಿಗೆ ಐದು ಸಾವಿರ ವೆಂಟಿಲೇಟರ್ ಉತ್ಪಾದನಾ ಸಾಮರ್ಥ್ಯವಿದೆ. ದೃಢೀಕೃತ ಆದೇಶ ವಿಳಂಬವಾದರೆ ಬೇಡಿಕೆಯನ್ನು ಕೂಡಲೇ ಪೂರೈಸುವುದು ಕಷ್ಟವಾಗುತ್ತದೆ.

-ವಿಶ್ವಪ್ರಸಾದ್ ಆಳ್ವ, ಆಡಳಿತ ನಿರ್ದೇಶಕ, ಸ್ಕ್ಯಾನ್‍ರೇ ಕಂಪನಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X