ಹಸಿವಿನಿಂದ ಕಂಗೆಟ್ಟವರಿಗೆ ಅನ್ನ ನೀಡುವಲ್ಲಿ ಒಂದಾದ ಮಂಗಳೂರು ಜನತೆ

ಮಂಗಳೂರು, ಮಾ. 27: ನಗರದ ವಿವಿಧ ಕಡೆಗಳಲ್ಲಿ ಹಸಿವಿನಿಂದ ಬಳಲುತ್ತಿರುವ ಜನರಿಗೆ ಅನ್ನ ಆಹಾರ ನೀಡುತ್ತಿರುವುದು ಕಂಡು ಬಂದಿದೆ.
ನಗರದ ನೆಹರೂ ಮೈದಾನದ ಬಳಿ ವೈಟ್ ಡೌವ್ ಸಂಸ್ಥೆಯ ಕೊರಿನ್ ರಸ್ಕಿನ್ ಅವರ ತಂಡ ಸುಮಾರು 350ಕ್ಕೂ ಅಧಿಕ ಜನರಿಗೆ ಮಧ್ಯಾಹ್ನದ ಊಟ ಉಪಹಾರ ವಿತರಿಸಿದರು.
ನಗರದ ರೈಲು ನಿಲ್ದಾಣದ ಬಳಿ ಜೆಪ್ಪು ಟೀಮ್ ಸುಲ್ತಾನ್ ತಂಡದವರು ಉಪಹಾರ ಲಘು ಪಾನೀಯ ವಿತರಿಸಿದರು. ಪಕ್ಕದಲ್ಲಿ ಶ್ರೀ ರಾಮ ಸೇನೆಯ ತಂಡ ಗಂಜಿ ಊಟ ವಿತರಿಸಿದ ದೃಶ್ಯ ಕಂಡು ಬಂದಿತು.
Next Story







