ಶನಿವಾರ ದ.ಕ. ಜಿಲ್ಲೆ ಸಂಪೂರ್ಣ ಬಂದ್ : ಸಚಿವ ಕೋಟ
ದಿನಸಿ ಅಂಗಡಿ ಸಹಿತ ವಾಣಿಜ್ಯ ವ್ಯವಹಾರ ಬಂದ್

ಮಂಗಳೂರು : ಕೊರೋನ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯು ಶನಿವಾರ ಸಂಪೂರ್ಣ ಬಂದ್ ಆಗಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ದ.ಕ. ಜಿಲ್ಲೆಯಲ್ಲಿ ಈವರೆಗೆ 7 ಪ್ರಕರಣಗಳು ದೃಢವಾಗಿದೆ. ನೆರೆಯ ಕಾಸರಗೋಡು ಮತ್ತು ಉತ್ತರ ಕರ್ನಾಟಕ ಜಿಲ್ಲೆಯಲ್ಲೂ ಈ ಪ್ರಕರಣ ಹೆಚ್ಚುತ್ತಿವೆ. ಸಾರ್ವಜನಿಕರ ಆರೋಗ್ಯ ಹಿತ ದೃಷ್ಟಿಯಿಂದ ಪ್ರತಿಯೊಬ್ಬರು ಮನೆಯೊಳಗೆ ಕುಳಿತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾಗಿದೆ. ಹಾಗಾಗಿ ಶನಿವಾರ ವಾಣಿಜ್ಯ ವ್ಯವಹಾರಗಳನ್ನು, ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಮುಚ್ಚಲು ಸಭೆಯಲ್ಲಿ ನಿರ್ಧರಿಸಲಾಗಿದೆ. ತುರ್ತು ಸೇವೆಗಳಾದ ಮೆಡಿಕಲ್, ಹಾಲು, ಅಡುಗೆ ಅನಿಲ, ಪತ್ರಿಕೆ ಮಾರಾಟ ಇತ್ಯಾದಿಗೆ ಬಂದ್ ನಿಂದ ವಿನಾಯಿತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
Next Story





